ಭಾರತ ಖಂಡದ ಮೂಲ ಅಸ್ಮಿತೆಯೇ ಸನಾತನ ಸಂಸ್ಕೃತಿ, ಹಿಂದೂ ಆಚರಣೆ ಆಗಿದೆ. ಹಿಂದೂ ಭಾರತದ ಮೂಲ ತತ್ವ. ಹಿಂದೂ ಎಂದರೆ ಸಹಿಷ್ಣುತೆ, ಉದಾರತೆ ಆಗಿದೆ. ಆದರೆ ರಾಹುಲ್ ಗಾಂಧಿ ಅವರು ಅನ್ಯ ಧರ್ಮದ ತುಷ್ಟೀಕರಣ ಮಾಡಲು ಮತ್ತು ತಮ್ಮ ವೋಟ್ ಬ್ಯಾಂಕನ್ನು ತೃಪ್ತಿಪಡಿಸಲು ಹಿಂದೂಗಳನ್ನು ಅವಹೇಳನ ಮಾಡಿ ತಾನೊಬ್ಬ ವಿರೋಧ ಪಕ್ಷದ ನಾಯಕ ಎಂಬ ಜವಾಬ್ದಾರಿಯನ್ನೂ ಮರೆತು ಲೋಕಸಭೆಯಲ್ಲಿ ತನ್ನ ಮೊದಲ ಬಾಷಣದಲ್ಲೇ ‘ಹಿಂದೂಗಳು ಎಂದು ಕರೆಸಿಕೊಳ್ಳುವವರು ಸದಾ ‘ಹಿಂಸಾಚಾರ, ಅಸತ್ಯ ಮತ್ತು ದ್ವೇಷದಲ್ಲಿ’ ನಿರತರಾಗಿರುವವರು ಎಂದು ಹೇಳುವ ಮೂಲಕ ತನ್ನ ಅಪ್ರಬುದ್ಧತೆಯನ್ನು ಪ್ರದರ್ಶಿಸಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು ತಿಳಿಸಿದ್ದಾರೆ.
ರಾಹುಲ್ ಗಾಂಧಿ ಈ ರೀತಿ ಮಾತನಾಡುವುದು ಮೊದಲ ಬಾರಿ ಅಲ್ಲ. ಈ ಹಿಂದೆ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸಮಾರಂಭದಲ್ಲಿ ಮಾತನಾಡಿ, ಹಿಂದೂ ಧರ್ಮದಲ್ಲಿ ‘ಶಕ್ತಿ’ ಎಂಬ ಪದವಿದೆ. ನಾವು ಶಕ್ತಿಯ ವಿರುದ್ಧ ಹೋರಾಡುತ್ತಿದ್ದೇವೆ ಎಂದಿದ್ದರು.
ಅಷ್ಟೇ ಅಲ್ಲದೆ ತನ್ನ ಇಂಡಿ ಮೈತ್ರಿ ಕೂಟದ ನಾಯಕರು ಹಿಂದೂಗಳ ವಿರುದ್ಧ ಆಡಿರುವ ಮಾತುಗಳು ಹಲವಾರು. ಡಿಎಂಕೆಯ ಸ್ಟಾಲಿನ್, ಎಸ್ ಪಿ ಹಾಗೂ ಆರ್ ಜೆ ಡಿ ಯ ನಾಯಕರು ಹಾಗೂ ತಮ್ಮ ಮೈತ್ರಿಯ ಭಾಗವಾದ ಮುಸ್ಲಿಂ ಲೀಗ್ ತನ್ನ ಮೆರವಣಿಗೆಯಲ್ಲಿ ಹಿಂದೂಗಳ ಶಿರಚ್ಛೇದ ಮಾಡುತ್ತೇವೆ ಎಂದು ಬಹಿರಂಗ ಹೇಳಿಕೆ ನೀಡಿದಾಗ ಕೂಡ ತುಟಿ ಬಿಚ್ಚದ ಕಾಂಗ್ರೆಸ್ ಮನಸ್ಥಿತಿ ಏನು ಎಂಬುದನ್ನು ಅರಿಯಬಹುದು.
ನಮ್ಮ ದೇವಾನುದೇವತೆಗಳ ಒಂದು ಕೈಯಲ್ಲಿ ಶಾಸ್ತ್ರವಿದ್ದರೆ, ಇನ್ನೊಂದು ಕೈಯಲ್ಲಿ ಶಸ್ತ್ರವು ಇರುತ್ತದೆ. ಧರ್ಮವನ್ನು ಅನುಸರಿಸದಿದ್ದರೆ, ಅಂದರೆ ನ್ಯಾಯ ನೀತಿ ಮೀರಿ ನಡೆದರೆ ಶಸ್ತ್ರಾಸ್ತ್ರಗಳನ್ನು ಹಿಡಿದು ಶಿಕ್ಷೆಯನ್ನು ನೀಡುವ ಉದ್ದೇಶ ನಮ್ಮ ದೇವರು ಮತ್ತು ದೇವತೆಗಳಿಗೆ ಅನಾದಿ ಕಾಲದಿಂದಲೂ ಇದೆ. ಇದೆಲ್ಲ ವಿದೇಶಿ ನೆಲದ ಸಂಸ್ಕೃತಿಯ ನೆರಳಲ್ಲಿ ಬೆಳೆದವರಿಗೆ ತಿಳಿಯದು.
ಕೋಟ್ಯಾಂತರ ಹಿಂದೂಗಳ ಭಾವನೆಗೆ ನೋವುಂಟು ಮಾಡಿದ ರಾಹುಲ್ ಗಾಂಧಿ ಅವರು ಕೂಡಲೇ ರಾಷ್ಟ್ರದ ಸಮಸ್ತ ಹಿಂದೂ ಸಮುದಾಯದ ಕ್ಷಮೆ ಕೇಳಬೇಕು ಎಂದು ಶ್ರೀನಿಧಿ ಹೆಗ್ಡೆ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ಧಾರೆ.