Sunday, July 21, 2024
Homeರಾಷ್ಟ್ರೀಯಸವಾಲಿನಂತೆ ನಡೆದುಕೊಂಡ ರಾಜಸ್ಥಾನ ಬಿಜೆಪಿ ಸರ್ಕಾರದ ಸಚಿವ: ಚುನಾವಣೆ ಸೋಲಿನ ಹೊಣೆಹೊತ್ತು ರಾಜೀನಾಮೆ

ಸವಾಲಿನಂತೆ ನಡೆದುಕೊಂಡ ರಾಜಸ್ಥಾನ ಬಿಜೆಪಿ ಸರ್ಕಾರದ ಸಚಿವ: ಚುನಾವಣೆ ಸೋಲಿನ ಹೊಣೆಹೊತ್ತು ರಾಜೀನಾಮೆ

ಜೈಪುರ: ಲೋಕಸಭಾ ಚುನಾವಣೆಯ ಸೋಲಿನ ಹೊಣೆಹೊತ್ತು ರಾಜಸ್ಥಾನ ಬಿಜೆಪಿ ಸರ್ಕಾರದ ಸಚಿವ ಕಿರೋಡಿ ಲಾಲ್‌ ಮೀನಾ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮುಂದಾಳತ್ವದ ಏಳು ಸ್ಥಾನಗಳ ಪೈಕಿ ಬಿಜೆಪಿ ಯಾವುದೇ ಸ್ಥಾನದಲ್ಲಿ ಸೋತರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದ ಕಿರೋಡಿ ಲಾಲ್‌ ಮೀನಾ, ಅದರಂತೆ ನಡೆದುಕೊಂಡಿದ್ದಾಎರ. ತಮ್ಮ ತವರು ಕ್ಷೇತ್ರ ದೌಸಾ ಸೇರಿದಂತೆ ಬಿಜೆಪಿ ಕೆಲವು ಸ್ಥಾನಗಳಲ್ಲಿ ಸೋತಿರುವುದರಿಂದ ಅವರು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.


ಬಿಜೆಪಿ ಆಡಳಿತವಿರುವ ರಾಜಸ್ಥಾನದಲ್ಲಿ ಕಾಂಗ್ರೆಸ್‌ 8 ಸ್ಥಾನಗಳನ್ನು ಗೆದ್ದುಕೊಂಡಿದೆ. 14ರಲ್ಲಿ ಬಿಜೆಪಿ ಗೆದ್ದಿದೆ.

RELATED ARTICLES
- Advertisment -
Google search engine

Most Popular