ಕಾರು ಕೊಂಡುಕೊಳ್ಳುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಹೀಗಾಗಿ ದುಡಿದ ಹಣದಲ್ಲಿ ಅಲ್ಪ ಸ್ವಲ್ಪ ಹಣ ಕೂಡಿಟ್ಟು, ಕಾರು ಖರೀದಿ ಮಾಡುವುದನ್ನು ನೋಡಿರಬಹುದು. ಇನ್ನು ಕೆಲವರು ಇಎಂಐಯಲ್ಲಿ ಕಾರು ಖರೀದಿ ತಮ್ಮ ಕನಸನ್ನು ನನಸು ಮಾಡಿಕೊಳ್ಳುತ್ತಾರೆ. ಅಷ್ಟೇ ಅಲ್ಲದೇ ಸೆಕೆಂಡ್ ಕೆಲವು ಮಾರ್ಪಡು ಮಾಡುವುದನ್ನು ನೋಡಿರಬಹುದು. ಇಲ್ಲೊಬ್ಬ ವ್ಯಕ್ತಿ ಕಾರಿನ ತುಂಬಾ ಒಂದು ರೂಪಾಯಿ ನಾಣ್ಯ ಅಂಟಿಸಿ ಗಮನ ಸೆಳೆದಿದ್ದಾನೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈತನ ಕ್ರಿಯೆಟಿವಿಯನ್ನು ಮೆಚ್ಚಿಕೊಂಡಿದ್ದಾರೆ.
ಈ ಕಾರಿನ ವೀಡಿಯೊವನ್ನು @experiment_king ಪುಟದಿಂದ Instagram ನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಒಂದು ಕಾರನ್ನು ಕಟೌಟ್ ಪ್ರದೇಶದಲ್ಲಿ ನಿಲ್ಲಿಸಲಾಗಿದೆ. ಒಂದು ರೂಪಾಯಿ ನಾಣ್ಯಗಳಿಂದ ಕಾರನ್ನು ಅಲಂಕರಿಸಿರುವುದನ್ನು ಇಲ್ಲಿ ನೋಡಬಹುದು. ಹೊರಗಿನಿಂದ ನೋಡಿದರೆ ಕಾರಿಗೆ ಸಿಲ್ವರ್ ಕಲರ್ ಬಳಿದಂತೆ ಕಾಣುತ್ತದೆ. ಆದರೆ ನಾಣ್ಯಗಳಿಂದ ಅಲಂಕರಿಲಾಗಿದ್ದು, ಬಿಸಿಲಿಗೆ ಫಳ ಫಳನೇ ಹೊಳೆಯುತ್ತಿದೆ.
ಇನ್ನು ಉಳಿದಂತೆ ಕಾರಿನ ಕನ್ನಡಿಗಳು, ಟೈಯರ್ ಹಾಗೂ ದೀಪಗಳನ್ನು ಹೊರತು ಪಡಿಸಿ, ಇಡೀ ವಾಹನವು ಒಂದು ರೂಪಾಯಿ ನಾಣ್ಯದಿಂದಲೇ ಸಿಂಗಾರಗೊಂಡಿದೆ. ಈ ವಿಡಿಯೋ ಇಲ್ಲಿಯವರೆಗೆ ಐದು ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಕಂಡಿದ್ದು, ಈ ವಿಡಿಯೋಗೆ ನೆಟ್ಟಿಗರಿಂದ ಮೆಚ್ಚುಗೆ ಮಹಾಪೂರವೇ ಹರಿದು ಬಂದಿದೆ. ಒಬ್ಬ ಬಳಕೆದಾರರು ‘ಹಣ ಮುಖ್ಯವಲ್ಲ, ಬದಲಾವಣೆ ಮುಖ್ಯ ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಮಕ್ಕಳನ್ನು ದಯವಿಟ್ಟು ಈ ವಾಹನದಿಂದ ದೂರವಿರಿ’ ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು, ‘ಈ ಕಾರು ಅಷ್ಟೊಂದು ಬೆಲೆ ಬಾಳುವುದಿಲ್ಲ’ ಎಂದಿದ್ದಾರೆ.