ಮುಲ್ಕಿ: ಕೆಮ್ರಾಲ್ ಗ್ರಾಮ ಪಂಚಾಯತ್ ವತಿಯಿಂದ ಪಂಚಾಯತ್ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪದ್ಮನಾಭ ಶೆಟ್ಟಿಗಾರ್ ಪಕ್ಷಿಕೆರೆ ರವರನ್ನು ಗ್ರಾಮಸ್ಥರ ಪರವಾಗಿ ಗೌರವಿಸಲಾಯಿತು.
ಸಭೆ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷ ಮಯ್ಯದ್ಧಿ ವಹಿಸಿ ಮಾತನಾಡಿ ಯಕ್ಷಗಾನ ದಿಗ್ಗಜರಾಗಿ ನಾಡಿಗೆ ಕಲಾವಿದರಾದ ಪದ್ಮನಾಭ ಶೆಟ್ಟಿಗಾರ ರವರ ಕಲೆಯ ಕೊಡುಗೆ ಅನನ್ಯ ಎಂದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಪಂಚಾಯತ್ ಸದಸ್ಯರಾದ ಲೀಲಾ ಕೃಷ್ಣಪ್ಪ,ಕೇಶವ ಪಂಜ, ರೇವತಿ ಶೆಟ್ಟಿಗಾರ್, ಮೆಲಿಟ ಡಿಸೋಜಾ, ಜಯಂತಿ ಶೆಟ್ಟಿ, ಜಾಕ್ಸನ್ ಸಲ್ದಾನ, ಮಾಲತಿ, ರಾಜೇಶ್ ಶೆಟ್ಟಿ ಸುಮಿತ್ರ, ಪಂಚಾಯತ್ ಪಿ ಡಿ ಓ ಅರುಣ್ ಪ್ರದೀಪ್ ಡಿಸೋಜಾ, ಕಾರ್ಯದರ್ಶಿ ಹರಿಶ್ಚಂದ್ರ, ಲೆಕ್ಕಿಗ ಕೇಶವ ಮತ್ತಿತರರು ಉಪಸ್ಥಿತರಿದ್ದರು. ಅರುಣ್ ಪ್ರದೀಪ್ ಡಿಸೋಜಾ ಸ್ವಾಗತಿಸಿ ನಿರೂಪಿಸಿದರು
ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪದ್ಮನಾಭ ಶೆಟ್ಟಿಗಾರ್ ಅವರ ಸಾಧನೆಗೆ ಕೆಮ್ರಾಲ್ ಗ್ರಾಮ ಪಂಚಾಯತ್ ನಿಂದ ಸನ್ಮಾನ
RELATED ARTICLES