ಬಹರೈನ್ ದೇಶದ ತುಳುಕೂಟ ಅಧ್ಯಕ್ಷ ಅನಿವಾಸಿ ಭಾರತೀಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಜಕುಮಾರ್ ಬಹರೈನ್ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಕಚೇರಿ ಭೇಟಿ ನೀಡಿದರು.
2022 ರ ಸಾಲಿನ ಕರ್ನಾಟಕ ಸರಕಾರದ ಅನಿವಾಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರಾಜಕುಮಾರ ಇವರು ಭಾಸ್ಕರ್ ಪಾಲನ್ ಮತ್ತು ಸುಂದರಿ ಅಮೀನ್ ಇವರ ಜೇಷ್ಠ ಪುತ್ರರಾಗಿ ಉಡುಪಿ ಜಿಲ್ಲೆಯ ಅಂಬಲಪಾಡಿ ಊರಿನಲ್ಲಿ ಜನಿಸಿ ಪದವಿ ಕಲಿಕೆಯನ್ನು ತಮ್ಮ ಹುಟ್ಟೂರಿನಲ್ಲಿ ಮುಗಿಸಿ ವೃತ್ತಿಯಲ್ಲಿ ಉದ್ಯಮಿಯಾಗಿರುವ ದಾಮೋದರ್ ಮುಲ್ಕಿ ಮಾಜಿ ಶಾಸಕರ ಸುಪುತ್ರಿ, ಪತ್ನಿ ಡಾ. ಚೇತನ ರಾಜಕುಮಾರ್ ಹಾಗೂ ಮಗಳು ಆರ್ಯ ರಾಜಕುಮಾರ್ ಇವರನ್ನೊಳಗೊಂಡ ಸುಖಿ ಪರಿವಾರ ಉದ್ಯೋಗ ನಿಮಿತ ಬಹರೈನ್ ದೇಶಕ್ಕೆ ಬಂದಂತ ಇವರು ಸುಮಾರು 10 ವರ್ಷಗಳ ಕಾಲ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕನ್ನಡ ಸಂಘದ ಅಧ್ಯಕ್ಷರಾಗಿ ಭಾರತಾಂಬೆಯ ಕನ್ನಡ ಸಂಸ್ಕೃತಿಯನ್ನು ಅರಬ್ ರಾಷ್ಟ್ರದಲ್ಲಿ ಬಿತ್ತರಿಸುವ ಮಾತ್ಕಾರ್ಯ ಮಾಡಿರುವವರಾಗಿರುತ್ತಾರೆ.
ಇವರು ಹತ್ತು ಹಲವು ಪ್ರಶಸ್ತಿಗಳನ್ನು ಪುರಸ್ಕಾರಗಳನ್ನು ಪಡೆದಿದ್ದು ತುಳು ಕನ್ನಡ ಅಭಿವೃದ್ಧಿಗೆ ಬಹಳಷ್ಟು ಕಾರ್ಯವನ್ನು ಮಾಡಿದ್ದು 2019 ರ ತುಳುನಾಡು ರಕ್ಷಣಾ ವೇದಿಕೆ ಆಯೋಜಿಸಿದ ವಿಶ್ವ ತುಳು ಸಮ್ಮೇಳನದಲ್ಲಿ ತೌಳವ ರತ್ನ ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾಗಿರುತ್ತಾರೆ.
ಪ್ರಸ್ತುತ ತುಳುಕೂಟ ಬಹರೈನ್ ಅಧ್ಯಕ್ಷರಾಗಿರುವ ರಾಜಕುಮಾರರು ಇಂದು ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಕಚೇರಿಗೆ ಆಗಮಿಸಿದ್ದು ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಮಂಡಳಿ ಅಧ್ಯಕ್ಷರಾದ ಯೋಗಿಶ್ ಶೆಟ್ಟಿ ಜಪ್ಪುರವರು ಹೂ ಗುಚ್ಚ ಶಾಲು ಹಾಕಿ ಗೌರವಿಸಿದ್ದರು.
ಉಡುಪಿ ಜಿಲ್ಲಾ ವೀಕ್ಷಕ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ಪ್ರಸ್ತಾವನೆ ಮಾತನಾಡಿದರು. ಜಿಲ್ಲಾಧ್ಯಕ್ಷ ಕೃಷ್ಣಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಮಿಕ ಘಟಕ ಜಿಲ್ಲಾಧ್ಯಕ್ಷ ಜಯ ಪೂಜಾರಿ ಲಕ್ಷ್ಮಿನಗರ ಧನ್ಯವಾದ ಅರ್ಪಣೆಗೈದರು. ಉಳ್ಳಾಲ ತಾಲೂಕು ಪ್ರಧಾನ ಕಾರ್ಯದರ್ಶಿ ಸುಕೇಶ್ ಜಿಕೆ ಉಚ್ಚಿಲ
ಜ್ಯೋತಿ , ಲಕ್ಷ್ಮಿಬಾಯಿ, ಬ್ರಿಜೇಶ್ ತನ್ವೀರ್, ಬಾಲಚಂದ್ರ ಮತ್ತಿತರ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು.