ಕನ್ನಡ ರಾಜ್ಯೋತ್ಸವದ ಅಂಗವಾಗಿ ಸ್ಪೇನ್ ದೇಶದ ಆರ್ಥಿಕ ರಾಜಧಾನಿ ಬಾರ್ಸಿಲೋನಾ ನಗರದ ಕನ್ನಡ ಸಂಘದ ವತಿಯಿಂದ ದಿನಾಂಕ 1/11/2024, ಶುಕ್ರವಾರದಂದು ರಾಜ್ಯೋತ್ಸವ ಸಂಭ್ರಮ ಕಾರ್ಯಕ್ರಮವನ್ನು ಬಹಳ ವಿಜ್ರಂಭಣೆಯಿಂದ ಆಚರಿಸಿ ಸಂಭ್ರಮಿಸಲಾಯಿತು.
ಬಾರ್ಸಿಲೋನಾ ಸಂಸದ ರಾರ್ಬರ್ಟ ಮತ್ತು ಭಾರತೀಯ ರಾಯಭಾರಿ ಕಛೇರಿಯ ಇಂದು ಶೇಖರ್ ಉಪಸ್ಥಿತರಿದ್ದರು. 50 ಕ್ಕೂ ಹೆಚ್ಚು ಕನ್ನಡಿಗರು ಈ ಸಂಭ್ರಮದಲ್ಲಿ ಭಾಗಿಯಾದರು.