Thursday, July 25, 2024
Homeರಾಜ್ಯರಕ್ಷಿತ್ ಕೋಟ್ಯಾನ್ 'ಮಿಸ್ಟರ್ ಕರಾವಳಿ 2024', ಧೀರಜ್ ಕುಮಾರ್ 'ರನ್ನರ್ ಅಪ್', ಝಾಕಿರ್ ಹುಲ್ಲೂರ್ ಗೆ...

ರಕ್ಷಿತ್ ಕೋಟ್ಯಾನ್ ‘ಮಿಸ್ಟರ್ ಕರಾವಳಿ 2024’, ಧೀರಜ್ ಕುಮಾರ್ ‘ರನ್ನರ್ ಅಪ್’, ಝಾಕಿರ್ ಹುಲ್ಲೂರ್ ಗೆ ‘ಬೆಸ್ಟ್ ಪೋಸರ್’ ಪ್ರಶಸ್ತಿ

ಉಡುಪಿಯಲ್ಲಿ ನಡೆದ ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯ ವಿಜೇತರು

ಗೋವಾದಲ್ಲಿ ಏ.6 ಮತ್ತು 7ರಂದು ನಡೆಯಲಿರುವ ‘ಫೆಡರೇಶನ್ ಕಪ್’ ರಾಷ್ಟ್ರಮಟ್ಟದ ದೇಹದಾರ್ಢ್ಯ ಸ್ಪರ್ಧೆಗೆ ಪೂರ್ವಭಾವಿಯಾಗಿ ‘ಮಿಸ್ಟರ್ ಕರಾವಳಿ ಕ್ಲಾಸಿಕ್ 2024’ ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯು ಚಾಂಪಿಯನ್ಶಿಪ್ ನ ಸಂಘಟನಾ ಸಮಿತಿಯ ನೇತೃತ್ವದಲ್ಲಿ ಉಡುಪಿ ಡಿಸ್ಟಿಕ್ ಎಸೋಸಿಯೇಷನ್ ಆಫ್ ಬಾಡಿ ಬಿಲ್ಡರ್ಸ್ ಇದರ ಸಹಯೋಗದೊಂದಿಗೆ ಕರ್ನಾಟಕ ಎಸೋಸಿಯೇಷನ್ ಆಫ್ ಬಾಡಿ ಬಿಲ್ಡರ್ಸ್ ಇದರ ಮಾರ್ಗದರ್ಶನದಲ್ಲಿ ಉಡುಪಿ ಬನ್ನಂಜೆಯ ಬಿಲ್ಲವರ ಸೇವಾ ಸಂಘದ ಶಿವಗಿರಿ ಸಭಾಂಗಣದಲ್ಲಿ ನಡೆಯಿತು.

ರಕ್ಷಿತ್ ಕೋಟ್ಯಾನ್ ಉಡುಪಿ ‘ಮಿಸ್ಟರ್ ಕರಾವಳಿ ಕ್ಲಾಸಿಕ್ 2024’ ಪ್ರಶಸ್ತಿ ಪಡೆದರು. ಧೀರಜ್ ಕುಮಾರ್ ಉಡುಪಿ ‘ರನ್ನರ್ ಅಪ್’ ಹಾಗೂ ಝಾಕಿರ್ ಹುಲ್ಲೂರ್ ಧಾರವಾಡ ‘ಬೆಸ್ಟ್ ಪೋಸರ್’ ಪ್ರಶಸ್ತಿ ಪಡೆದರು.

ದೇಹ ತೂಕದ ಒಟ್ಟು 8 ವಿಭಾಗಗಳಲ್ಲಿ ನಡೆದ ದೇಹದಾರ್ಢ್ಯ ಸ್ಪರ್ಧೆಯ ಮೊದಲ 5 ಸ್ಥಾನಗಳ ವಿಜೇತರ ವಿವರ:

55 ಕೆಜಿ ವಿಭಾಗ : ಕೃಷ್ಣಪ್ರಸಾದ್ ಉಡುಪಿ, ಸಲ್ಮಾನ್ ಖಾನ್ ಶಿವಮೊಗ್ಗ, ಕೃಷ್ಣ ಹರಿಕಾಂತ್ರ ಉ.ಕ., ಪ್ರಜ್ವಲ್ ಉಡುಪಿ, ಆಕಾಶ್ ಜೊಗಾನಿ ಬೆಳಗಾವಿ
60 ಕೆಜಿ ವಿಭಾಗ : ಗಂಗಾಧರ ಸ್ವಾಮಿ ದಾವಣಗೆರೆ, ಝಾಕಿರ್ ಹುಲ್ಲೂರ್ ಧಾರವಾಡ, ರೊನಾಲ್ಡ್ ಡಿಸೋಜ ದ.ಕ., ರಾಕೇಶ್ ಬಳ್ಳಾರಿ, ವಿಕ್ಷಿತ್ ರಾಜ್ ಉಡುಪಿ
65 ಕೆಜಿ ವಿಭಾಗ : ಧೀರಜ್ ಕುಮಾರ್ ಉಡುಪಿ, ಸೂರಜ್ ಆಚಾರ್ಯ ದ.ಕ., ಆಶಿಶ್ ಉಡುಪಿ, ಮುಕೇಶ್ ಉಡುಪಿ, ಓಂಕಾರ್ ಪಾಟೀಲ್ ಬೆಳಗಾವಿ
70 ಕೆಜಿ ವಿಭಾಗ : ರಕ್ಷಿತ್ ಕೋಟ್ಯಾನ್ ಉಡುಪಿ, ಸುನಿಲ್ ಭಟ್ಕಂಡೆ ಬೆಳಗಾವಿ, ಗಣೇಶ್ ಪಾಟೀಲ್ ಬೆಳಗಾವಿ, ಮಯೂರ್ ಮೆನ್ಸೆ ಬೆಳಗಾವಿ, ಸೋಮಶೇಖರ್ ಖಾರ್ವಿ ಉಡುಪಿ
75 ಕೆಜಿ ವಿಭಾಗ : ಪ್ರತಾಪ್ ಕಲ್ಕುಂಡ್ರಿಕರ್ ಬೆಳಗಾವಿ, ಸತ್ಯಾನಂದ ಭಟ್ ಮೈಸೂರು, ಚೇತನ್ ಕುಮಾರ್ ದ.ಕ., ಪವನ್ ರಾಜ್ ಉಡುಪಿ, ಸಾಹೇಬ್ ಲಾಲ್ ಬಿಜಾಪುರ್
80 ಕೆಜಿ ವಿಭಾಗ : ಕುಮಾರ್ ಉ.ಕ., ಶೈಲೇಶ್ ದ.ಕ., ರಾಜೇಶ್ ಉಡುಪಿ, ಶಿವಪ್ರಸಾದ್ ದ.ಕ.
85 ಕೆಜಿ ವಿಭಾಗ : ಚರಣ್ ರಾಜ್ ಉಡುಪಿ, ಮಹೇಶ್ ಗವಾಲಿ ಬೆಳಗಾವಿ, ಪ್ರಸಾದ್ ಬಚೇಕರ್ ಬೆಳಗಾವಿ, ಸಂದೀಪ್ ಉಡುಪಿ
+85 ಕೆಜಿ ವಿಭಾಗ : ಸ್ವರೂಪ್ ಬಂಗೇರ ಉಡುಪಿ, ಗೌತಮ್ ಉಡುಪಿ

‘ಮಿಸ್ಟರ್ ಕರಾವಳಿ ಕ್ಲಾಸಿಕ್ 2024’ ರಾಜ್ಯ ಮಟ್ಟದ ದೇಹದಾಢ್ಯ ಸ್ಪರ್ಧೆಯನ್ನು ಕರ್ನಾಟಕ ಅಸೋಸಿಯೇಷನ್ ಆಫ್ ಬಾಡಿ ಬಿಲ್ಡರ್ಸ್ ಅಧ್ಯಕ್ಷ ಜೆ.ನೀಲಕಂಠ ಅಧ್ಯಕ್ಷತೆಯಲ್ಲಿ ಉಡುಪಿ ಡಿಸ್ಟ್ರಿಕ್ಟ್ ಅಸೋಸಿಯೇಷನ್ ಆಫ್ ಬಾಡಿ ಬಿಲ್ಡರ್ಸ್ ಅಧ್ಯಕ್ಷ ಜೇಸನ್ ಡಯಾಸ್ ಮತ್ತು ಬನ್ನಂಜೆ ಶ್ರೀ ನಾರಾಯಣ ಗುರು ಮಂದಿರದ ಪ್ರಧಾನ ಅರ್ಚಕ ದಯಾಕರ ಶಾಂತಿ ಉಪಸ್ಥಿತಿಯಲ್ಲಿ ಉಡುಪಿ ನಗರಸಭಾ ಸದಸ್ಯ ವಿಜಯ ಕೊಡವೂರು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.

‘ಮಿಸ್ಟರ್ ಕರಾವಳಿ ಕ್ಲಾಸಿಕ್ 2024’ ಪ್ರಶಸ್ತಿಯನ್ನು ಉದ್ಯಮಿ ಶಶಿಧರ್ ಕುಂದರ್ ಮಲ್ಪೆ ವಿತರಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಅಸೋಸಿಯೇಷನ್ ಆಫ್ ಬಾಡಿ ಬಿಲ್ಡರ್ ಅಧ್ಯಕ್ಷ ಜೆ. ನೀಲಕಂಠ, ಉಪಾಧ್ಯಕ್ಷ ಗಂಗಾಧರ್ ಎಮ್., ಪ್ರಧಾನ ಕಾರ್ಯದರ್ಶಿ ಜಿ.ಡಿ. ಭಟ್, ಕೋಶಾಧಿಕಾರಿ ದಿಲೀಪ್ ಕುಮಾರ್, ಅಂತರಾಷ್ಟ್ರೀಯ ದೇಹದಾಢ್ಯ ಪಟು ಲವೀನ್ ಕೆ. ಮಂಗಳೂರು, ಚಾಂಪಿಯನ್ಶಿಪ್ ಸಂಘಟನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಸಾಲ್ಯಾನ್, ಸಂಘಟನಾ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ, ಉಪಾಧ್ಯಕ್ಷ ಅಶೋಕ್ ಬಂಗೇರ, ಕೋಶಾಧಿಕಾರಿ ಮಾರುತಿ ಜಿ. ಬಂಗೇರ, ಉಡುಪಿ ಡಿಸ್ಟ್ರಿಕ್ಟ್ ಅಸೋಸಿಯೇಷನ್ ಆಫ್ ಬಾಡಿ ಬಿಲ್ಡರ್ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಕಾಮತ್, ರಾಷ್ಟ್ರೀಯ ತೀರ್ಪುಗಾರ ಉಮಾ ಮಹೇಶ್, ರಾಜ್ಯ ತೀರ್ಪುಗಾರ ರತ್ನಾಕರ ಖಾರ್ವಿ, ರಾಷ್ಟ್ರೀಯ ದೇಹದಾಡ್ಯ ಪಟು ಬಾಬು ಪೂಜಾರಿ ಉಪ್ಪುಂದ, ಅಂತಾರಾಷ್ಟ್ರೀಯ ಕರಾಟೆ ಪಟು ಪ್ರವೀಣಾ ಸುವರ್ಣ ಪರ್ಕಳ, ಪ್ರಮುಖರಾದ ರಾಧಾಕೃಷ್ಣ ಮೆಂಡನ್, ಸಂತೋಷ್ ಸಾಲ್ಯಾನ್, ತ್ರಿವಿದ್ ಕಾಂಚನ್, ಶೋಧನ್, ನಯನಾ ನೀಲಕಂಠ, ಉಮೇಶ್ ಸಾಲ್ಯಾನ್, ರಮೇಶ್ ಪೂಜಾರಿ, ಪಲ್ಲವಿ ಸಾಲ್ಯಾನ್, ಸುಶೀಲ ಸಾಲ್ಯಾನ್, ಸುಜಾತ ಪೂಜಾರಿ, ಗಾಯತ್ರಿ ಪೂಜಾರಿ, ವ್ಯಯಾನ್ ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular