ಬೆಂಗಳೂರು: ಕಾಪಿರೈಟ್ ಆರೋಪದಲ್ಲಿ ನಟ ರಕ್ಷಿತ್ ಶೆಟ್ಟಿ ವಿರುದ್ಧ ನವೀನ್ ಕುಮಾರ್ ಎಂಬವರು ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 2024ರ ಮಾರ್ಚ್‌ನಲ್ಲಿ ಲೂಸ್ ಮಾದ ಯೋಗಿ, ದಿಗಂತ್ ಅಭಿನಯದ ʻಬ್ಯಾಚುಲರ್ ಪಾರ್ಟಿʼ ಸಿನೆಮಾ ರಿಲೀಸ್ ಆಗಿತ್ತು. ಆ ಸಿನೆಮಾದಲ್ಲಿ ಎರಡು ಸಿನೆಮಾಗಳ ಹಾಡುಗಳನ್ನು ಅನುಮತಿ ಇಲ್ಲದೆ ಬಳಕೆ ಮಾಡಿದ್ದಾರೆ ಎಂದು ನವೀನ್ ಕುಮಾರ್ ಆರೋಪಿಸಿದ್ದಾರೆ.
ಎಂಆರ್‌ಟಿ ಮ್ಯೂಸಿಕ್ಸ್ ಪಾಲುದಾರ ನವೀನ್ ಜೊತೆ ಬ್ಯಾಚುಲರ್ ಪಾರ್ಟಿ ಚಿತ್ರ ತಂಡ ಹಾಡುಗಳ ಬಗ್ಗೆ ಚರ್ಚೆ ಮಾಡಿತ್ತು. ಆದರೆ ಚರ್ಚೆಯಲ್ಲಿ ಎಲ್ಲಾ ಮಾತುಗಳು ವಿಫಲವಾಗಿದ್ದವು. ಆದರೂ ರಕ್ಷಿತ್ ಶೆಟ್ಟಿ ತಮ್ಮ ಸಿನೆಮಾದಲ್ಲಿ ಈ ಹಾಡುಗಳನ್ನು ಬಳಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನ್ಯಾಯ ಎಲ್ಲಿದೆ? ಸಿನೆಮಾದ ʻನ್ಯಾಯ ಎಲ್ಲಿದೆʼ ಎಂಬ ಹಾಡು ಮತ್ತು ಗಾಳಿಮಾತು ಸಿನೆಮಾದ ʻಒಮ್ಮೆ ನಿನ್ನನ್ನೂʼ ಎಂಬ ಹಾಡು ಅನುಮತಿ ಇಲ್ಲದೆ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಟ ರಕ್ಷಿತ್ ಶೆಟ್ಟಿ ವಿರುದ್ಧ ಎಫ್‌ಐಆರ್ | ʻಬ್ಯಾಚುಲರ್ ಪಾರ್ಟಿʼಯಲ್ಲಿ ಅವರು ಮಾಡಿದ ಲೋಪವಾದರೂ ಏನು?
RELATED ARTICLES