Sunday, July 14, 2024
Homeಉಡುಪಿಹೊಸ ಸಿನೆಮಾ ಆರಂಭಕ್ಕೂ ಮುನ್ನ ಬಬ್ಬುಸ್ವಾಮಿ ಕೊರಗಜ್ಜ ಸನ್ನಿಧಾನದಲ್ಲಿ ರಕ್ಷಿತ್‌ ಶೆಟ್ಟಿ ವಿಶೇಷ ಪ್ರಾರ್ಥನೆ

ಹೊಸ ಸಿನೆಮಾ ಆರಂಭಕ್ಕೂ ಮುನ್ನ ಬಬ್ಬುಸ್ವಾಮಿ ಕೊರಗಜ್ಜ ಸನ್ನಿಧಾನದಲ್ಲಿ ರಕ್ಷಿತ್‌ ಶೆಟ್ಟಿ ವಿಶೇಷ ಪ್ರಾರ್ಥನೆ

ಉಡುಪಿ: ಹೊಸ ಚಿತ್ರಕ್ಕೆ ಚಾಲನೆ ನೀಡುವ ಮುನ್ನ ನಟ ರಕ್ಷಿತ್‌ ಶೆಟ್ಟಿ ಬಬ್ಬುಸ್ವಾಮಿ-ಕೊರಗಜ್ಜ ಸನ್ನಿಧಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಸಿನೆಮಾ ಸಕ್ಸಸ್‌ ನಂತರ ಹೊಸ ಸಿನೆಮಾದ ಕೆಲಸದಲ್ಲಿ ರಕ್ಷಿತ್‌ ತೊಡಗಿಸಿಕೊಂಡಿದ್ದಾರೆ.
ರಿಚರ್ಡ್‌ ಆಂಟನಿ ಚಿತ್ರದಲ್ಲಿ ನಟಿಸುವ ಜೊತೆಗೆ ನಿರ್ದೇಶನವನ್ನೂ ರಕ್ಷಿತ್‌ ಮಾಡುತ್ತಿದ್ದಾರೆ. ಈ ನಡುವೆ ಬೈಲೂರಿನ ನೀಲಕಂಠ ಬಬ್ಬುಸ್ವಾಮಿ ಕೊರಗಜ್ಜ ದೈವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಹೊಸ ಕೆಲಸಕ್ಕೆ ಕೈಹಾಕುವಾಗ ಎಲ್ಲಾ ತುಳುವರಂತೆ ರಕ್ಷಿತ್‌ ಶೆಟ್ಟಿ ದೈವ ದೇವರ ಪ್ರಾರ್ಥನೆ ಮಾಡಿ ಮುಂದುವರಿಯುತ್ತಾರೆ. ಅದರಂತೆ ಈ ಬಾರಿ ಬಬ್ಬುಸ್ವಾಮಿ ಕೊರಗಜ್ಜ ದೈವಸ್ಥಾನಕ್ಕೆ ಭೇಟಿ ಪ್ರಾರ್ಥನೆ ಸಲ್ಲಿಸಿದ್ದಾರೆ.

RELATED ARTICLES
- Advertisment -
Google search engine

Most Popular