ಜಿ ಎಸ್ ಬಿ ಸಮಾಜ ರಾಮ ಮಂದಿರ ಮಲ್ಪೆ ಇದರ ರಜತ ಮೊಹೋತ್ಸವ ಅಂಗವಾಗಿ ಯಕ್ಷಗಾನ ತಾಳಮದ್ದಳೆ ಚೂಡಾಮಣಿ ಪ್ರಸಂಗ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು. ತಾಳೆಮದ್ದಳೆಯಲ್ಲಿ ಭಾಗವತರಾಗಿ ಗಣೇಶ್ ಆಚಾರ್ಯ ಬಿಲ್ಲಾಡಿ , ಮದ್ದಳೆಯಲ್ಲಿ ಶಶಾಂಕ್ ಆಚಾರ್ಯ , ಚಂಡೆಯಲ್ಲಿ ರವಿ ಕಾಡೂರು, ಅರ್ಥಧಾರಿಗಳಾಗಿ ಪ್ರೊ ಪಾವನ ಕಿರಣಕೆರೆ, ರಮಣಾಚಾರ್ಯ ಕಾರ್ಕಳ, ಪ್ರದೀಪ್ ಸಾಮಗ, ಹರೀಶ್ ಜೋಷಿ ವಿಟ್ಲ ಸಹಕರಿಸಿದರು
ರಾಮ ಮಂದಿರದ ಅಧ್ಯಕ್ಷರಾದ ಗೋಕುಲ್ ದಾಸ್ ಪೈ ಕಲಾವಿದರನ್ನು ಸಮಾಜದ ವತಿಯಿಂದ ಗೌರವಿಸಿದರು. ಅರ್ಚಕ ಶೈಲೇಶ್ ಭಟ್, ಎಮ್ ಎಲ್ ಸಾಮಗ, ಸುದೀರ್ ಪೈ, ಅನಿಲ್ ಕಾಮತ್, ಜಿ ಎಸ್ ಬಿ ಮಹಿಳಾ ಮಂಡಳಿ, ಯುವಕ ಮಂಡಳಿಯ ಸದಸ್ಯರು ಸಹಕರಿಸಿದರು. ಮಹಾಪೂಜೆಯ ಬಳಿಕ ಪ್ರಸಾದ ವಿತರಣೆ ನಡೆಯಿತು.