Sunday, March 16, 2025
Homeಉಡುಪಿಮಾ.6 ಅಯೋಧ್ಯೆ ಶ್ರೀ ರಾಮ ಮಂದಿರ ದರ್ಶನ ಭಾಗ್ಯಕ್ಕೆ ಉಡುಪಿ ಜಿಲ್ಲೆಯ ರಾಮ ಭಕ್ತರು ಸಜ್ಜು

ಮಾ.6 ಅಯೋಧ್ಯೆ ಶ್ರೀ ರಾಮ ಮಂದಿರ ದರ್ಶನ ಭಾಗ್ಯಕ್ಕೆ ಉಡುಪಿ ಜಿಲ್ಲೆಯ ರಾಮ ಭಕ್ತರು ಸಜ್ಜು

ಉಡುಪಿ: ಭಾರತೀಯ ಜನತಾ ಪಾರ್ಟಿ ದೇಶದಾದ್ಯoತ ಹಮ್ಮಿಕೊಂಡಿರುವ ಅಯೋಧ್ಯೆ ಶ್ರೀ ರಾಮ ಮಂದಿರ ದರ್ಶನ ಅಭಿಯಾನದಡಿ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಸುಮಾರು 1,336 ಮಂದಿ ರಾಮ ಭಕ್ತರು ಶ್ರೀ ರಾಮ ದರ್ಶನ ಭಾಗ್ಯ ಪಡೆಯಲು ಸಜ್ಜಾಗಿದ್ದಾರೆ. ಈ ಅಭಿಯಾನದಡಿ ಪ್ರಥಮ ಹಂತದ ಕೊನೆಯ ತಂಡದ ಪ್ರಯಾಣ ಇದಾಗಿದೆ.

ಮಂಗಳೂರಿನಿಂದ ಅಯೋಧ್ಯೆಗೆ ತೆರಳಲಿರುವ ವಿಶೇಷ ರೈಲು ‘ಆಸ್ತಾ’ದಲ್ಲಿ ಇಂದು ಮಾ.6ರ ಸಂಜೆ ಗಂಟೆ 6.00ಕ್ಕೆ ಅಯೋಧ್ಯೆಗೆ ಪ್ರಯಾಣ ಬೆಳೆಸಲಿರುವ ಉಡುಪಿ ಜಿಲ್ಲೆಯ ಸುಮಾರು 400 ಮoದಿ ರಾಮ ಭಕ್ತರನ್ನು ಪಕ್ಷದ ಮುಖಂಡರು, ಶಾಸಕರುಗಳು ಮತ್ತು ಕಾರ್ಯಕರ್ತರು ಸಂಜೆ ಇಂದ್ರಾಳಿ ರೈಲ್ವೇ ನಿಲ್ದಾಣದಲ್ಲಿ ಬೀಳ್ಕೊಡಲ್ಲಿದ್ದಾರೆ ಎಂದು ಅಯೋಧ್ಯೆ ಶ್ರೀರಾಮ ಮಂದಿರ ದರ್ಶನ ಅಭಿಯಾನದ ಮಂಗಳೂರು ವಿಭಾಗ ಪ್ರಭಾರಿ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular