ಕೊಲ್ಕತಾ: ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ನ 17ನೇ ಅಧ್ಯಕ್ಷರಾಗಿ ಬೆಂಗಳೂರು ಮೂಲದ ಗೌತಮಾನಂದಜೀ ಮಹಾರಾಜ್ ಆಯ್ಕೆಯಾಗಿದ್ದಾರೆ. 95 ವರ್ಷದ ಗೌತಮಾನಂದಜೀ ಅವರನ್ನು ಬುಧವಾರ ನಡೆದ ಮಠದ ಆಡಳಿತ ಮಂಡಳಿ ಹಾಗೂ ಮಠಾಧೀಶರ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ. ಪಶ್ಚಿಮ ಬಂಗಾಳದ ಬೇಲೂರು ಮಠದಲ್ಲಿ ಬುಧವಾರ ಮಠದ ಾಡಳಿತ ಮಂಡಳಿ ಹಾಗೂ ಮಠಾಧೀಶರ ಸಭೆ ನಡೆದಿದೆ. ಹಿಂದಿನ ಅಧ್ಯಕ್ಷ ಸ್ವಾಮಿ ಸ್ಮರಣಾನಂದ ಮಹಾರಾಜ್ ನಿಧನರಾಗಿದ್ದ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆ ನಡೆದಿದೆ. 1929ರಲ್ಲಿ ಬೆಂಗಳೂರಿನಲ್ಲಿ ಜನಿಸಿದ್ದ ಗೌತಮಾನಂದಜೀ 2017ರಲ್ಲಿ ಮಿಷನ್ ನ ಉಪಾಧ್ಯಕ್ಷರಾಗಿದ್ದರು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಗೌತಮಾನಂದಜೀ ಅವರಿಗೆ ಪ್ರಧಾನಿ ನರೇಂಧ್ರ ಮೋದಿ ಸಹಿತ ಹಲವು ಗಣ್ಯರು ಶುಭಕೋರಿದ್ದಾರೆ.