Friday, March 21, 2025
Homeಹೆಬ್ರಿರಾಮಾಯಣ - ಮಹಾಭಾರತ ಸಂಬಂಧಿತ ವಿಜೇತರಿಗೆ ಪದಕ ಮತ್ತು ಪ್ರಮಾಣಪತ್ರ ಪ್ರದಾನ ಸಮಾರಂಭ

ರಾಮಾಯಣ – ಮಹಾಭಾರತ ಸಂಬಂಧಿತ ವಿಜೇತರಿಗೆ ಪದಕ ಮತ್ತು ಪ್ರಮಾಣಪತ್ರ ಪ್ರದಾನ ಸಮಾರಂಭ

ಹೆಬ್ರಿ : ಪಿ ಆರ್ ಎನ್ ಅಮೃತಭಾರತಿ ವಿದ್ಯಾ ಕೇಂದ್ರ ದ 8 ಮತ್ತು 9 ನೇ ತರಗತಿಯ ವಿದ್ಯಾರ್ಥಿಗಳು ಭಾರತ ಸಂಸ್ಕೃತಿ ಪ್ರತಿಷ್ಠಾನ (ರಿ) ಬೆಂಗಳೂರು, ಇವರು ನವೆಂಬರ್ ತಿಂಗಳಲ್ಲಿ ನಡೆಸಿರುವ ರಾಮಾಯಣ – ಮಹಾಭಾರತ ಪರೀಕ್ಷೆಯಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ 10 ವಿದ್ಯಾರ್ಥಿಗಳಿಗೆ ಸ್ವರ್ಣ ಪದಕ ಮತ್ತು ಪ್ರಶಸ್ತಿ ಪತ್ರ ಪ್ರದಾನ ಹಾಗೂ ಪರೀಕ್ಷೆ ಬರೆದ ಸಂಸ್ಥೆಯ ಸುಮಾರು 310 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಪ್ರದಾನ ಸಮಾರಂಭ ನಡೆಯಿತು.

ಅಮೃತ ಭಾರತಿ ಟ್ರಸ್ಟ್ ನ ಕಾರ್ಯದರ್ಶಿ ಗುರುದಾಸ್ ಶೆಣೈ ಯವರು ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ MPM GFGC ನ ಪ್ರೊಫೆಸರ್ ಆದ ಸುಷ್ಮಾ ರವರು ಹಾಗೂ ಹೆಬ್ರಿಯ ದಾನಿಯಾದ ರೀನಾ ಬೀಜೂರು ರವರು ಮಾತನಾಡಿ ಮಕ್ಕಳಿಗೆ ಶುಭ ಹಾರೈಸಿದರು. ಸಂಸ್ಥೆಯ ವಿದ್ಯಾರ್ಥಿಗಳಾದ ಪ್ರಣವ್ ಹೆಬ್ಬಾರ್,ಕೃಷ್ಣಪ್ರಸಾದ್ ಭಟ್,ಆಯುಷ್ ಆರ್,ಶ್ರೀಗೌರಿ ಪಿ.ಕೆ,ಅಕ್ಷೋಭ್ಯ,ಸಿಂಚನ ಶೆಟ್ಟಿ,ಅಕ್ಷರ ಆರ್ ಭಟ್,ಸಿದ್ಧಾರ್ಥ್ ರಾವ್,ಸುಜಿತ್ , ತಸ್ವಿ ವಿ ಕಾಂಚನ್ ಸ್ವರ್ಣ ಪದಕ ಮತ್ತು ಪ್ರಶಸ್ತಿ ಪತ್ರ ಪಡೆದರು.

ಈ ಸಂದರ್ಭದಲ್ಲಿ ಪರೀಕ್ಷಾ ಸಂಯೋಜಕರಾದ ಸುಗೀತ ಮತ್ತು ಪ್ರತಿಮಾ ಉಪಸ್ಥಿತ ರಿದ್ದರು. ಅಮೃತಭಾರತಿ ವಿದ್ಯಾ ಕೇಂದ್ರದ ಪ್ರಾಂಶುಪಾಲರಾದ ಅರುಣ್ , ಮುಖ್ಯ ಶಿಕ್ಷಕಿಯಾದ ಅನಿತಾ ಹಾಗೂ ಸಂಸ್ಥೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular