Wednesday, September 11, 2024
Homeದಾವಣಗೆರೆರಾಮಾಯಣ ಮಾಸಾಚರಣೆ ಹಾಗೂ ಗಮಕ ಕಾರ್ಯಕ್ರಮದ ವಾರ್ಷಿಕೋತ್ಸವ ಆಧ್ಯಾತ್ಮ ಕಾರ್ಯಕ್ರಮ ಸಮರಂಭ

ರಾಮಾಯಣ ಮಾಸಾಚರಣೆ ಹಾಗೂ ಗಮಕ ಕಾರ್ಯಕ್ರಮದ ವಾರ್ಷಿಕೋತ್ಸವ ಆಧ್ಯಾತ್ಮ ಕಾರ್ಯಕ್ರಮ ಸಮರಂಭ

ಆಧ್ಯಾತ್ಮ ಪರಂಪರೆ ಶಿಕ್ಷಣಕ್ಕೆ ಪೂರಕ -ಡಾ. ಶ್ರೀಧರ್ ಭಟ್

ದಾವಣಗೆರೆ ಆಗಸ್ಟ್ –
ಶಿಕ್ಷಣ ಕೇವಲ ಅಂಕಪಟ್ಟಿಗೆ ಸೀಮಿತವಾಗದ ನಮ್ಮ ನಿಮ್ಮೆಲ್ಲರ ಆಧ್ಯಾತ್ಮ ಪರಂಪರೆ ಮಕ್ಕಳ ಶಿಕ್ಷಣಕ್ಕೆ
ಪೂರಕ ಹಾಗೂ ಪರಿಪೂರ್ಣತೆ ಸಿಗುತ್ತದೆ. ಪ್ರಸ್ತುತ ದಿನಮಾನಗಳಲ್ಲಿ ಆಧುನಿಕ ತಂತ್ರಜ್ಞಾನದ
ಭರಾಟೆಯಲ್ಲಿ ನಮ್ಮ ಸಂಸ್ಕೃತಿ, ಸಂಸ್ಕಾರ ಮರೆಯಾಗುತ್ತಿರುವುದು ವಿಷಾದ ಸಂಗತಿ ಎಂದು
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆ ಮಂಗಲ್ಪಾಡಿಯ ಏಕಾಹ ಭಜನಾ ಮಂದಿರದ ಆಡಳಿತ
ಸಮಿತಿ ಅಧ್ಯಕ್ಷರಾದ ಡಾ. ಶ್ರೀಧರ್ ಭಟ್ ಅನಿಸಿಕೆ ಹಂಚಿಕೊಂಡರು.

ಕಲಾಕುಂಚ ಕೇರಳ ಗಡಿನಾಡ ಘಟಕ ಮತ್ತು ಏಕಾಹ ಭಜನಾ ಮಂದಿರ ಸಮಿತಿಯ ಸಂಯುಕ್ತಾಶ್ರಯದಲ್ಲಿ ಇತ್ತೀಚಿಗೆ ನಡೆದ ಮಂಗಲ್ಪಾಡಿಯ ಏಕಾಹ ಭಜನಾ ಮಂದಿರದ ಸಭಾಂಗಣದಲ್ಲಿ ನಡೆದ ರಾಮಾಯಣ ಮಾಸಾಚರಣೆ ಹಾಗೂ ಗಮಕ ಕಾರ್ಯಕ್ರಮದ ವಾರ್ಷಿಕೋತ್ಸವ ಆಧ್ಯಾತ್ಮ ಕಾರ್ಯಕ್ರಮ ಸಮರಂಭ ಉದ್ಘಾಟಿಸಿ ಅವರು ಮಾತನಾಡಿದರು. ದೇವರಾಜಮಯ್ಯ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭದ ಅಧ್ಯಕ್ಷತೆ ವಹಿಸಿದ ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ಅಧ್ಯಕ್ಷರಾದ ಜಯಲಕ್ಷ್ಮೀ ಕಾರಂತ್
ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಣ್ಣೂರು ವಿಭಾಗದ ಮಾತೃಶಕ್ತಿ ಸಮಿತಿಯ ಮುಖ್ಯಸ್ಥರಾದ ವೀರಾ ಆಳ್ವ ಬಹುಮಾನ ವಿಜೇತ ಮಕ್ಕಳಿಗೆ ಶುಭ ಕೋರಿದರು.

ರಾಮಾಯಣ ರಸಪ್ರಶ್ನೆ ಸ್ಪರ್ಧೆಯಲ್ಲಿ ಆರು ಶಾಲೆಗಳ ವಿದ್ಯಾರ್ಥಿನಿಯರು ಭಾಗವಹಿಸಿ ಬಹುಮಾನ ವಿಜೇತರಾದರು ಧರ್ಮತ್ತಡ್ಕ ದುರ್ಗಾಪರಮೇಶ್ವರಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿಯರಾದ ಆತ್ಮಿಕಾ. ಜಿ.ಯು, ಪ್ರತಿಕ್ಷಾ ಬಿ., ಪ್ರಥಮ ಬಹುಮಾನ ಪಡೆದರು ದ್ವಿತೀಯ ಬಹುಮಾನ ನಿತ್ಯಾನಂದ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಮಿಥಿಲ್ ವಿ.ರೈ ಹಾಗೂ ಭರತ ಕೃಷ್ಣ ಬಿ. ಪಡೆದುಕೊಂಡರು.

ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಬಹುಮಾನ ವಿಜೇತರಿಗೆ
ನಗದು ಬಹುಮಾನ, ಸ್ಮರಣೆಕೆ ನೀಡಿ ಗೌರವಿಸಲಾಯಿತು ಎಂದು ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ
ಗಣೇಶ್ ಶೆಣೈ ತಿಳಿಸಿದ್ದಾರೆ. ತಾರಾ ಪ್ರವೀಣ್ ಕಾರ್ಯಕ್ರಮ ನಿರ್ವಹಿಸಿದರು. ರಾಮಾಯಣದ ಸುಂದರ ಕಾಂಡದ ಗಮಕವಾಚನವನ್ನು ದಿವ್ಯಾ ಚಂದನ್ ಕಾರಂತ್ ನೆರೆವೇರಿಸಿದರು. ಜಯಲಕ್ಷ್ಮಿಕಾರಂತ್ ವ್ಯಾಖ್ಯಾನ ಮಾಡಿದರು. ಜಯಲಕ್ಷ್ಮಿ ರಾಮಚಂದ್ರವಳ್ಳ ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರೂಪಿಸಿದರು. ಈ ಆಧ್ಯಾತ್ಮ ರಾಮಾಯಣದ ಸಮಾರಂಭವನ್ನು ವಿಜೃಂಭಣೆಯಿಂದ ವೀಕ್ಷಿಸಿದ ಪ್ರೇಕ್ಷಕರು ಜನ ಮೆಚ್ಚುಗೆ ಪಡೆದರು. ಕೊನೆಯಲ್ಲಿ ಚಂದನ ಕಾರಂತ್ ವಂದಿಸಿದರು.

RELATED ARTICLES
- Advertisment -
Google search engine

Most Popular