spot_img
31.6 C
Udupi
Wednesday, June 7, 2023
spot_img
spot_img
spot_img

ಏ.7ರಿಂದ ರಾಮಾಯಣ ಯಾತ್ರ ರೈಲು ಆರಂಭ

ನವದೆಹಲಿ: ಧಾರ್ಮಿಕ ಪ್ರವಾಸಿ ತಾಣಗಳ ಗತವೈಭವ ಮತ್ತಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ಹಾಗೂ ಭಾರತೀಯ ರೈಲ್ವೇ ಈಗಾಗಲೇ ಭಾರತ್ ಗೌರವ್ ಡಿಲಕ್ಸ್ ರೈಲು ಘೋಷಿಸಿದೆ. ಸಂಪೂರ್ಣ ರಾಮಾಯಣ ದರ್ಶನ ಮಾಡಿಸುವ ರಾಮಾಯಾಣ ಯಾತ್ರ ರೈಲು ಏಪ್ರಿಲ್ 7 ರಿಂದ ಆರಂಭಗೊಳ್ಳಲಿದೆ. ಶ್ರೀರಾಮನ ಆಯೋಧ್ಯೆ ಸೇರಿದಂತೆ ಇಡೀ ರಾಮಾಯಣದಲ್ಲಿ ಬರುವ ಪ್ರಮುಖ ಧಾರ್ಮಿಕ ಸ್ಥಳಗಳಿಗೆ ಬೇಟಿ ನೀಡುವ ಈ ರೈಲು, ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. 2AC, 1AC ಹಾಗೂ 1AC ಕೂಪ್ ಕ್ಲಾಸ್‌ಗಳಲ್ಲಿ ಈ ರೈಲಿನಲ್ಲಿ ಪ್ರಯಾಣ ಮಾಡಬಹುದು.
ರಾಮಾಯಣ ಯಾತ್ರ ರೈಲು ಒಟ್ಟು 18 ದಿನ ಹಾಗೂ 17 ದಿನದ ಪ್ಯಾಕೇಜ್ ಆಗಿದೆ. ಪ್ರವಾಸಿಗರು ಈ ರೈಲಿನ ಮೂಲಕ ಶ್ರೀರಾಮನ ಸಂಪೂರ್ಣ ಪುರಾಣವನ್ನು ತಿಳಿದುಕೊಳ್ಳಲು ಹಾಗೂ ರಾಮಾಯಣದಲ್ಲಿ ಬರುವ ಪ್ರಮುಖ ಐತಿಹಾಸಿಕ ಸ್ಥಳ ಹಾಗೂ ದೇವಸ್ಥಾನಗಳಿಗೆ ಬೇಟಿ ನೀಡಲು ಸಾಧ್ಯವಿದೆ.
ರೈಲು ಭೇಟಿ ನೀಡುವ ಸ್ಥಳ
ಆಯೋಧ್ಯ: ರಾಮ ಜನ್ಮಭೂಮಿ ಮಂದಿರ, ಹನುಮಾನ್ ಗರ್ಹಿ, ಸರಯೂ ಘಾಟ್
ನಂದೀಗ್ರಾಮ:ಭಾರತ್ ಹನುಮಾನ್ ಮಂದಿರ,ಭಾರತ್ ಕುಂದ್
ಜನಕಪುರ: ರಾಮ ಜಾನಕಿ ಮಂದಿರ
ಸೀತಾಮರಾಹಿ: ಜಾನಕಿ ಮಂದಿರ ಹಾಗೂ ಪುನರ್ವ ಧಾಮ
ಬುಕ್ಸರ್ : ರಾಮ ರೇಖಾ ಘಾಟ್, ರಾಮೇಶ್ವರ ನಾಥ್ ದೇವಸ್ಥಾನ
ವಾರಣಾಸಿ : ತುಳಸಿ ಮಾನಸ ದೇವಸ್ಥಾನ, ಸಂಕಟ್ ಮೋಚನ್ ದೇವಸ್ಥಾನ, ವಿಶ್ವನಾಥ ದೇವಸ್ಥಾನ, ಗಂಗಾ ಆರತಿ
ಸೀತಾ ಮಾಹಿತಿ ಸ್ಥಳ, ಸೀತಾಮರಾಹಿ: ಸೀತಾ ಮಾತಾ ದೇವಸ್ಥಾನ
ಪ್ರಯಾಗರಾಜ್ : ಭಾರದ್ವಾಜ ಆಶ್ರಮ, ಗಂಗಾ ಯಮುನಾ ಸಂಗಮ, ಹನುಮಾನ ದೇವಸ್ಥಾನ
ಶ್ರಿಂಗ್ವೆರ್ಪುರ್: ಶ್ರಿಂಗಿ ರಿಷಿ ಸಮಾಧಿ, ಶಾಂತಾ ದೇವಿ ದೇವಸ್ಥಾನ, ರಾಮಚೌರ
ಚಿತ್ರಕೂಟ: ಗುಪ್ತ ಗೋದಾವರಿ, ರಾಮ ಘಾಟ್, ಸತಿ ಅನಸೂಯ ದೇವಸ್ಥಾನ
ನಾಸಿಕ್ : ತ್ರಯಂಬಕೇಶ್ವರ ದೇವಸ್ಥಾನ, ಪಂಚವಟಿ, ಸೀತಾಗುಹ, ಕಲರಾಮ ಮಂದಿರ
ಹಂಪಿ: ಅಂಜನಾದ್ರಿ ಬೆಟ್ಟ, ವಿರೂಪಾಕ್ಷ ದೇವಸ್ಥಾನ, ವಿಠಲ ಮಂದಿರ
ರಾಮೇಶ್ವರಂ : ರಾಮನಾಥ ಸ್ವಾಮಿ ಮಂದಿರ, ಧನುಷ್ಕೋಡಿ
ಬದ್ರಾಚಲಂ: ಶ್ರೀ ಸೀತಾ ರಾಮಚಂದ್ರಸ್ವಾಮಿ ಮಂದಿರ, ಆಂಜನೇಯ ಸ್ವಾಮಿ ಮಂದಿರ
ನಾಗ್ಪುರ: ರಾಮತೇಕ್ ಕೋಟೆ ಹಾಗೂ ಮಂದಿರ
ಟಿಕೆಟ್ ಬೆಲೆ:18 ದಿನ ಹಾಗೂ 17 ರಾತ್ರಿಯ ಪ್ರಯಾಣ, ಊಟ, ತಿಂಡಿ, ಹೊಟೆಲ್ ವಾಸ್ತವ್ಯ, ದೇವಸ್ಥಾನ ದರ್ಶನ, ಪ್ರಯಾ ವಿಮೆ ಸೇರಿದಂತೆ ಎಲ್ಲಾ ವೆಚ್ಚವನ್ನು ಟಿಕೆಟ್‌ನಲ್ಲಿ ಸೇರಿಸಲಾಗಿದೆ. 2AC ಕ್ಲಾಸ್ ಟಿಕೆಟ್‌ಗೆ 1,14,065 ರೂಪಾಯಿ. ಇನ್ನು 1 AC ಕ್ಲಾಸ್‌ಗೆ 1,46,545 ರೂಪಾಯಿ. ಇನ್ನೂ 1AC ಕೂಪ್ ಕ್ಲಾಸ್‌ಗೆ 1,68,950 ರೂಪಾಯಿ ನಿಗದಿಪಡಿಸಲಾಗಿದೆ. ಅತ್ಯುತ್ತಮ ಎಸಿ ಹೊಟೆಲ್‌ನಲ್ಲಿ ವಾಸ್ತವ್ಯ ಮಾಡಲಾಗುತ್ತದೆ. ಜೊತೆ ಸಂಪೂರ್ಣವಾಗಿ ಸಸ್ಯಾಹಾರಿ ಆಹಾರವಾಗಿರಲಿದೆ. ಇನ್ನು ರೈಲಿನಿಂದ ದೇವಸ್ಥಾನಕ್ಕೆ ತೆರಳು, ಪ್ರಮುಖ ಪ್ರೇಕ್ಷಣಿಯ ಸ್ಥಳಕ್ಕೆ ತೆರಳಲು ವಾಹನದ ವೆಚ್ಚವೂ ಈ ಟಿಕೆಟ್‌ನಲ್ಲಿ ಸೇರಿಸಲಾಗಿದೆ.

Related Articles

Stay Connected

0FansLike
3,803FollowersFollow
0SubscribersSubscribe
- Advertisement -

Latest Articles