ಮಕ್ಕಳನ್ನು ಎಷ್ಟು ಜಾಗೃತೆ ಮಾಡಿದರೂ ಸಾಕಾಗುವುದಿಲ್ಲ. ಇಲ್ಲೊಬ್ಬಳು ಆರು ವರ್ಷದ ಬಾಲಕಿ ರಂಬುಟಾನ್ ಹಣ್ಣು ತಿನ್ನುವಾಗ ಗಂಟಲಲ್ಲಿ ಸಿಲುಕಿ ಮೃತಪಟ್ಟ ಘಟನೆ ನಡೆದಿದೆ. ಕೇರಳದ ಪೆರುಂಬವೂರಿನಲ್ಲಿ ಈ ಘಟನೆ ನಡೆದಿದೆ.
ಕೇರಳದ ಪೆರುಂಬವೂರಿನ ಕಂಡಂತರ ಚಿರಾಯತುವೀಟ್‌ನಲ್ಲಿ ಮನ್ಸೂರ್ ಅವರ ಪುತ್ರಿ ನೂರಾ ಫಾತಿಮಾ (6) ಮೃತ ಬಾಲಕಿ. ಯುಕೆಜಿ ವಿದ್ಯಾರ್ಥಿನಿಯಾಗಿರುವ ನೂರ್ ಫಾತಿಮಾ ಸಂಜೆ ಮನೆಯಲ್ಲಿ ಇತರ ಮಕ್ಕಳೊಂದಿಗೆ ರಂಬುಟಾನ್ ತಿನ್ನುತ್ತಿದ್ದಾಗ ಈ ಘಟನೆ ನಡೆದಿದೆ. ಗಂಟಲಲ್ಲಿ ರಂಬುಟಾನ್ ಹಣ್ಣಿನ ಬೀಜ ಸಿಲುಕಿಕೊಂಡು ಉಸಿರಾಟಕ್ಕೆ ತೊಂದರೆಯಾಗಿದೆ. ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟೊತ್ತಿಗೆ ಬಾಲಕಿ ಮೃತಪಟ್ಟಿದ್ದಳು.