ಕುಂದಾಪುರ ತಾಲೂಕು ಜೋಗಿ ಸಮಾಜ ಸೇವಾ ಸಂಘ ( ರಿ ) ಇದರ 16 ನೇ ವಾರ್ಷಿಕ ಮಹಾಸಭೆ ದಿನಾಂಕ 09-03-2025 ರಂದು ವಾದಿರಾಜ ಕಲ್ಯಾಣ ಮಂಟಪ ಕೋಟೇಶ್ವರ ರಥಬೀದಿಯಲ್ಲಿ ನಡೆಯಿತು.
ಈ ಪ್ರಯುಕ್ತ ಬೆಳಿಗ್ಗೆ ಸತ್ಯನಾರಾಯಣ ಪೂಜೆ ಹಾಗೂ ಕ್ರೀಡಾ ಪ್ರಶಸ್ತಿ ಮತ್ತು ಸಾಂಸ್ಕೃತಿಕ ಸ್ಪರ್ಧೆ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ ನೆರವೇರಿತು.

ಗಣ್ಯರ ಉಪಸ್ಥಿತಿಯಲ್ಲಿ ಶೈಕ್ಷಣಿಕ ಸಾಮಾಜಿಕ ಧಾರ್ಮಿಕ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಅದೆಷ್ಟು ಬಡ ಕುಟುಂಬಗಳಿಗೆ ಆಶ್ರಯದಾತನಾಗಿರುವ ರಮೇಶ್ ಹೆಚ್. ಎಸ್ ಅವರು ಕುಂದಾಪುರ ಜೋಗಿ ಸಮಾಜದ ನೂತನ ಅಧ್ಯಕ್ಷರನ್ನಾಗಿ ಅವರನ್ನು ಸಮಾಜ ಭಾಂದವರರಿಂದ ಅವಿರೋದವಾಗಿ ಆಯ್ಕೆ ಮಾಡಿದ್ದಾರೆ ಉದ್ಯಮಿ ಭವಾನಿ ಗ್ರೂಪ್ ಮತ್ತು ಶ್ರೀ ಭವಾನಿ ಕಂಗನ್ ಸ್ಟೋರ್ ಮಾಲೀಕರು ಕೆ. ಏನ್. ಶ್ರೀನಿವಾಸ್ ಜೋಗಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ಪಾಂಡುರಂಗ ಜೋಗಿ, ಅಖಿಲ ಕರ್ನಾಟಕ ನಾಥಪಂಥ ಜೋಗಿ ಸಮಾಜದ ಅಧ್ಯಕ್ಷರಾದ ದೇವರಾಜ್ ಕೆ ಬಳೆಗಾರ್, ಉದ್ಯಮಿ ಹಾಗೂ ಭವಾನಿ ಗ್ರೂಪ್ ಮಾಲೀಕರಾದ ಕೆ. ಏನ್. ಶ್ರೀನಿವಾಸ್ ಜೋಗಿ ಕಂಡ್ಲೂರು, ಶೇಖರ್ ಬಳೆಗಾರ್ ಕಟ್ಟಬೇಲ್ತುರು, ಅಧ್ಯಕ್ಷರು ಜೋಗಿ ಸಮಾಜ ವಿವಿದ್ದೋದ್ದೇಶ ಸಹಕಾರ ಸಂಘ, ಯಶವಂತ ಜೋಗಿ ಕಾರ್ಯಪಾಲಕ ಅಭಿಯಂತರು ಕುಂದಾಪುರ ವಿಭಾಗ, ಮೆಸ್ಕಾಂ, ಅಶೋಕ್ ಬಳೆಗಾರ್, ದಯಾನಂದ ಬಳೆಗಾರ್, ಗೋವಿಂದ ಜೋಗಿ ಪಳ್ಳಿ ಸತ್ಯನಾರಾಯಣ ಜೋಗಿ ಹಂಗಳೂರು, ಗಣೇಶ್ ವಾಸುದೇವ ಬಳೆಗಾರ್, ರಜನಿ ಜೋಗಿ ಸೂಡ, ಹಾಗೂ ಮಂಜುನಾಥ್ ಜೋಗಿ ಕುಂಭಾಶಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.