ವರದಿ- ಮಂದಾರ ರಾಜೇಶ್ ಭಟ್ ತುಳುನಾಡುವಾರ್ತೆ
ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ ಏರ್ಪಡಿಸಲಾಗಿರುವ ಆಳ್ವಾಸ್ ಸಾಂಸ್ಕೃತಿಕ ವೈಭವ ಯಶಸ್ಸು ಗೊಳಿಸುವಂತೆ ರಮೇಶ ಶಂಕರಘಟ್ಟ ವಿನಂತಿಸಿದ್ದಾರೆ . ಮೂಡುಬಿದಿರೆಯ ಆಳ್ವಾಸ್ ಫೌಂಡೇಶನ್ ಅಧ್ಯಕ್ಷರಾದ ಡಾ.ಮೋಹನ್ ಆಳ್ವಾ ನೇತೃತ್ವದಲ್ಲಿ , ಸುಮಾರು 300ಕ್ಕೂ ಅಧಿಕ ವಿದ್ಯಾರ್ಥಿ ಕಲಾವಿದರು ನಡೆಸಿಕೊಡಲಿರುವ ನಮ್ಮ ದೇಶದ ಸಾಂಸ್ಕೃತಿಕ ಸೊಗಡನ್ನು ಬಿಂಬಿಸುವ ಕಲೆ,ಸಂಗೀತ, ನೃತ್ಯ, ಯಕ್ಷಗಾನ ಸಂಸ್ಕøತಿಯನ್ನು ಆನಾವರಣಗೊಳಿಸುವ ಆಳ್ವಾಸ್ ಸಾಂಸ್ಕøತಿಕ ವೈಭವ ಕಾರ್ಯಕ್ರಮವನ್ನು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಳ್ಳುವುದರ ಮೂಲಕ ಯಶಸ್ವಿಗೊಳಿಸಿಕೊಡಬೇಕೆಂದು ದೀನಬಂಧು ಸೇವಾಟ್ರಸ್ಟ್ ಅಧ್ಯಕ್ಷರೂ ಆದ ಎಂ.ರಮೇಶ್ ಶಂಕರಘಟ್ಟ ಕರೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಇದೇ ಡಿಸೆಂಬರ್ 14 ರಂದು ಭದ್ರಾವತಿಯಲ್ಲಿ, ಡಿಸೆಂಬರ್ 15 ರಂದು ಶಿವಮೊಗ್ಗ ನಗರದಲ್ಲಿ ಈ ಸಾಂಸ್ಖøತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದ್ದಾರೆ.
ಆಳ್ವಾಸ್ ನುಡಿಸಿರಿ ವಿರಾಸತ್ ಕಾರ್ಯಕ್ರಮಗಳು ನಮ್ಮ ಅವಳಿ ನಗರಗಳಲ್ಲಿ ನಡೆಯುತ್ತಿರುವುದು ನಿಜಕ್ಕೂ ನಮ್ಮ ಈ ಭಾಗದ ಕಲಾಸಕ್ತರಿಗೆ ಅತ್ಯಂತ ಸಂತೋಷ ತಂದಿದೆ. ದೇಶದ ಜನರ ಹೃದಯ ಗೆದ್ದಿರುವ ಇಂತಹ ಕಾರ್ಯಕ್ರಮವನ್ನು ಆಯೋಜಿಸುತ್ತಿರುವ ಭದ್ರಾವತಿಯ ಶಾಸಕರಾದ ಬಿ.ಕೆ. ಸಂಗಮೇಶ್ವರ್ ರವರಿಗೆ, ಆಳ್ವಾಸ್ ನುಡಿಸಿರಿ ವಿರಾಸತ್ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರಾದ ಎಸ್. ಪಿ.ದಿನೇಶ್ ರವರಿಗೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್. ಷಡಾಕ್ಷರಿಯವರಿಗೆ ಟ್ರಸ್ಟ್ ನ ಪರವಾಗಿ ಅಭಿನಂದನೆ ಸಲ್ಲಿಸಿದರು .
ಸಂಜೆ 5.46 ಗಂಟೆಗೆ ಸರಿಯಾದ ಸಮಯಕ್ಕೆ ಕಾರ್ಯಕ್ರಮ ಆರಂಭವಾಗದಲ್ಲಿದ್ದು, ಈ ಕಾರ್ಯಕ್ರಮವು ಭದ್ರಾವತಿಯ ಕನಕಮಂಟಪದಲ್ಲಿ ಹಾಗೂ ಶಿವಮೊಗ್ಗ ಫ್ರೀಡಂ ಪಾರ್ಕ್‍ನಲ್ಲಿ ಏರ್ಪಡಿಸಲಾಗಿದೆ. ಎಂದು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ .

