ಅಸ್ಸಾಲಾಮು ಅಲೈಕಮ್, ಮಾನ್ಯ ಸಹೋದರೇ ಟೀಮ್ ಮಲೆನಾಡು ಹ್ಯೂಮ್ಯಾನಿಟೇರಿಯನ್ ಟ್ರಸ್ಟ್ (ರಿ) ಬೆಳ್ವೆ . ಇದರ ವತಿಯಿಂದ ಬೆಳ್ವೆ ಶ್ರೀ ಸಂದೇಶ ಕಿಣಿ ಮೆಮೋರಿಯಲ್ ಫೌಂಡೇಶನ್ ಸಭಾಂಗಣದಲ್ಲಿ ರಂಝಾನ್ ಕಿಟ್” ವಿತರಣಾ ಕಾರ್ಯಕ್ರಮ ಇತ್ತಿಚಿಗೆ ನಡೆಯಿತು.ಟ್ರಸ್ಟ್ ಅಧ್ಯಕ್ಷರಾದ ಮುಸ್ತಾಕ್ ಅಹಮದ್ ಬೆಳ್ವೆ ಇವರ ಅಧ್ಯಕ್ಷತೆ ವಹಿಸಿದ್ದರು. ಜುಮ್ಮಾ ಮಸೀದಿ ಬೆಳ್ವೆ ಖತೀಬ್ ಮೌಲಾನ ಮೊಹಮ್ಮದ್ ರಫೀಕ್ ಕಿರತ್ ಪಠಿಸಿದರು.ಕರ್ನಾಟಕ ಬಾಂಧವ್ಯ ವೇದಿಕೆ ಪ್ರದಾನ ಕಾರ್ಯದರ್ಶಿ ಮುಸ್ತಾಕ್ ಹೆನ್ನಬೇಲ್ ಕಾರ್ಯಕ್ರಮ ಉದ್ಘಾಟಿಸಿದರು .
ಹೆಬ್ರಿ – ಹಾಲಾಡಿ ಪರಿಸದರ ಸುಮಾರು 33 ಅಶಕ್ತ ಕುಟುಂಬಗಳಿಗೆ ರಂಝಾನ್ ತಿಂಗಳ ಪ್ರಯುಕ್ತ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು. ಮುಖ್ಯ ಅತಿಥಿಗಳಾಗಿ ನಿವೃತ ಉಪನ್ಯಾಸಕ ಸೈಯದ್ ರಫೀಕ್, ಉದ್ಯಮಿ ಬೆಳ್ವೆ ಶಬ್ಬೀರ್ ಸಾಹೇಬ್, ಜುಮ್ಮಾ ಮಸೀದಿ ಬೆಳ್ವೆ ಅಧ್ಯಕ್ಷರಾದ ಅಹಮದ್ ಬ್ಯಾರಿ. ಕಾರ್ಯದರ್ಶಿ ಶಕೀಲ್ ಅಹಮದ್, ಜಿಲ್ಲಾ ನಮ್ಮ ನಾಡ ಒಕ್ಕೂಟದ ಸದಸ್ಯ ಹಾರೂನ್ ರಶೀದ್ , ಕೃಷಿಕ ಇಬ್ರಾಹಿಂ ಹೊನ್ಕಲ್, ಬೆಳ್ವೆ ಮದ್ರಸ ಕಮಿಟಿ ಉಪಾಧ್ಯಕ್ಷ ಅಬ್ದುಲ್ಲಾ ಸಾಹೇಬ್ ,ಷರೀಫ್ ಸಾಹೇಬ್ , ಟೀಮ್. ಮಲೆನಾಡು ಟ್ರಸ್ಟ್ ಟ್ರಸ್ಟಿ ನಝೀರ್ ಶಾ, ಸಮಾಜ ಸೇವಕಿ ರಜಿಯಾ ಬೇಗಂ ,ರಮ್ಲಾತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಟ್ರಸ್ಟ್ ಉಪಾಧ್ಯಕ್ಷ ಅಬ್ದುಲ್ ಶುಕೊರ್ ಬೆಳ್ವೆ , ಕೋಶಾಧಿಕಾರಿ ಮೊಹಮ್ಮದ್ ಆಸೀಫ್ ನೇತೃತ್ವ ವಹಿಸಿದ್ದರು. ಮೊಹಮ್ಮದ್ ರಬಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.