ದಾವಣಗೆರೆ : ದಾವಣಗೆರೆಯ ರಂಗಕಲಾ ಆಕಾಡೆಮಿಯಿಂದ ಜನವರಿ 12 ರಂದು ಭಾನುವಾರ ನಗರದ ಪಿ.ಜೆ. ಬಡಾವಣೆಯ ಎ.ವಿ.ಕೆ.ಕಾಲೇಜು ರಸ್ತೆಯಲ್ಲಿರುವ ರಂಗ ಮಹಲ್‌ನ ಸಭಾಂಗಣದಲ್ಲಿ ವಿವಿಧ ವಯೋಮಾನದ ಮಕ್ಕಳಿಗೆ ಸ್ಥಳದಲ್ಲೇ ಉಚಿತವಾಗಿ ಚಿತ್ರ ಬರೆಯುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಚಿತ್ರಕಲಾ ತೀರ್ಪುಗಾರರು, ಹಿರಿಯ ಚಿತ್ರ ಕಲಾವಿದರಾದ ರಾಮಮೂರ್ತಿ ತಿಳಿಸಿದ್ದಾರೆ.
1ನೇ ತರಗತಿಯಿಂದ 4ನೇ ತರಗತಿಮ ಮಕ್ಕಳ ಒಂದು ವಿಭಾಗ 5 ರಿಂದ 7 ನೇ ತರಗತಿ ಮಕ್ಕಳ ವಿಭಾಗ, 8 ರಿಂದ 9ನೇ ತರಗತಿಗೆ ಒಂದು ವಿಭಾಗದಲ್ಲಿ ಭಾಗವಹಿಸುವ ಮಕ್ಕಳು ಈ ಕೆಳಗಿನ ಸಹೀಹವಾಣಿ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಯುವ ಚಿತ್ರ ಕಲಾವಿದೆ, ಆಕಾಡೆಮಿಯ ನಿರ್ದೇಶಕರಾದ
ಕುಮಾರಿ ನೇಹಾ ಚನ್ನಗಿರಿ ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 9980868443, 9844467207 ಈ ಸನೀಹವಾಣಿಗಳಿಗೆ ಸಂಪರ್ಕಿಸಿ ಎಂದು ಅಕಾಡೆಮಿಯ ಗೌರವ ಸಲಹೆಗಾರರಾದ ಸಾಲಿಗ್ರಾಮ ಗಣೇಶ್
ಶೆಣೈ ಪ್ರಕಟಿಸಿದ್ದಾರೆ.