Friday, May 16, 2025
Homeರಾಷ್ಟ್ರೀಯಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ | ನಾಲ್ವರು ಅಪ್ರಾಪ್ತರು ಸೇರಿ 7 ಮಂದಿ ಬಂಧನ

ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ | ನಾಲ್ವರು ಅಪ್ರಾಪ್ತರು ಸೇರಿ 7 ಮಂದಿ ಬಂಧನ

ಜಲ್‌ಪಾಯ್‌ಗುರಿ: ಬಾಲಕಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಅಪ್ರಾಪ್ತರು ಸಹಿತ ಏಳು ಮಂದಿಯ ಬಂಧನವಾಗಿದೆ. ಪಶ್ಚಿಮ ಬಂಗಾಳದ ಜಲ್‌ಪಾಯ್‌ಗುರಿಯ ಚಹಾ ತೋಟವೊಂದರಲ್ಲಿ ಈ ಘಟನೆ ನಡೆದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾಲಕಿಯ ಕುಟುಂಬದವರು ಎಫ್‌ಐಆರ್‌ನಲ್ಲಿ ಹೆಸರಿಸಿರುವ ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಅಪ್ರಾಪ್ತ ಆರೋಪಿಗಳನ್ನು ಬಾಲಾಪರಾಧಿ ಗೃಹಕ್ಕೆ ಕಳುಹಿಸಲಾಗಿದೆ. ಮೂವರು ವಯಸ್ಕ ಆರೋಪಿಗಳಲ್ಲಿ ಒಬ್ಬನನ್ನು ನ್ಯಾಯಾಂಗ ಬಂಧನಕ್ಕೆ ಮತ್ತು ಇಬ್ಬರನ್ನು ಪೊಲೀಸ್‌ ಕಸ್ಟಡಿಗೆ ಒಪ್ಪಿಸಲಾಗಿದೆ.
ಅತ್ಯಾಚಾರದ ವಿಡಿಯೊ ವೈರಲ್‌ ಆಗಿತ್ತು. ಚಹಾ ತೋಟಕ್ಕೆ ಹೋಗಿದ್ದ ಬಾಲಕಿಯ ಮೇಲೆ ಏಳು ಮಂದಿ ಅತ್ಯಾಚಾರ ಮಾಡಿದ್ದರು. ಈ ಬಗ್ಗೆ ಬಾಲಕಿಯ ಕುಟುಂಬಸ್ಥರು ದೂರು ದಾಖಲಿಸಿದ್ದರು.

RELATED ARTICLES
- Advertisment -
Google search engine

Most Popular