ಕಾರ್ಕಳ ಆ 24: ನಿನ್ನೆಯ ದಿನ ಕಾರ್ಕಳದಲ್ಲಿ ಭೋವಿ ಸಮಾಜದ ಹಿಂದೂ ಯುವತಿಯ ಮೇಲೆ ನಡೆದಂತಹ ಅತ್ಯಾಚಾರ ಅಮಾನವೀಯ ಮತ್ತು ಪೈಶಾಚಿಕ ಕೃತ್ಯ, ಇದು ಖಂಡನೀಯ… ಇದು ಲವ್ ಜಿಹಾದ್ ನ ಮುಂದುವರಿದ ಭಾಗ.
ಶಾಂತಿ ಮತ್ತು ಸೌಹಾರ್ದತೆ, ಸಹಬಾಳ್ವೆ ಗೆ ಮಾದರಿಯಾಗಿದ್ದ ಕಾರ್ಕಳದ ಪರಿಸರದಲ್ಲಿ ಇಂತಹ ಕೃತ್ಯವನ್ನು ಎಸಗಿದ ಜಿಹಾದಿ ಮನೋಭಾವನೆಯ ವಿಕೃತರ ಅಟ್ಟಹಾಸ ಕಾರ್ಕಳದ ಜನಜೀವವನ್ನು ಜೀವನವನ್ನು ಬೆಚ್ಚಿ ಬೀಳಿಸುವಂತಿದೆ. ಅದಲ್ಲದೆ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ.
ಹಿಂದೂ ಯುವತಿಯನ್ನು ಮರಳು ಮಾಡಿ ಕಾರಿನಲ್ಲಿ ಕಾಡಿಗೆ ಕರೆದುಕೊಂಡು ಹೋಗಿ ಮಧ್ಯ ಮತ್ತು ಅಮಲು ಪದಾರ್ಥ ನೀಡಿ ಆಕೆಯನ್ನು ದುಷ್ಕರ್ಮಿಗಳು ಅತ್ಯಾಚಾರ ಎಸೆಗಿರುತ್ತಾರೆ. ಈ ವಿಕೃತ ಮನಸ್ಥಿತಿಯ ಜಿಹಾದಿಗಳನ್ನ, ಆರೋಪಿಗಳನ್ನ ತಕ್ಷಣಕ್ಕೆ ಬಂಧಿಸಿ, ಕಠಿಣ ಶಿಕ್ಷೆ ಕೊಡಿಸುವಲ್ಲಿ ಪೊಲೀಸ್ ಇಲಾಖೆ ಸಮರ್ಥವಾಗಿ ಕಾರ್ಯ ನಿರ್ವಹಿಸಬೇಕಾಗಿದೆ. ಕಾರ್ಕಳದಲ್ಲಿ ಗಾಂಜಾ, ಅಮಲು ಪದಾರ್ಥ ಹಾಗೂ ಸಮಾಜದ ಶಾಂತಿಯನ್ನು ಕೆಡಿಸುವಂತಹ ಮಡ್ಕಾ ದಂಧೆಗಳು ರಾಜಾರೋಷವಾಗಿ ನಡೆಯುತ್ತಿದೆ. ಇವುಗಳನ್ನೆಲ್ಲ
ಹತ್ತಿಕ್ಕದಿದ್ದಲ್ಲಿ ಸಮಾಜದಲ್ಲಿ ಶಾಂತಿ ನೆಲೆದೂರಲು ಸಾಧ್ಯವಿಲ್ಲ. ಈ ಪ್ರಕರಣದ ಎಲ್ಲರನ್ನೂ ತಕ್ಷಣವೇ ಬಂಧಿಸಿ ಕಠಿಣ ಶಿಕ್ಷೆಯನ್ನು ವಿಧಿಸಬೇಕು ಮತ್ತು ಈ ಆರೋಪಗಳಿಗೆ ನೀಡಿದ ಶಿಕ್ಷೆ ರಾಜ್ಯದಲ್ಲಿ ಮಾದರಿ ಶಿಕ್ಷೆಯಾಗಬೇಕು ನಗರ ಶಕ್ತಿ ಕೇಂದ್ರ, ಕಾರ್ಕಳ ಮಂಡಲ ಅಧ್ಯಕ್ಷರಾದ ನಿರಂಜನ್ ಜೈನ್ ರವರು ಆಗ್ರಹಿಸಿದ್ದಾರೆ .