Sunday, July 21, 2024
Homeಅಪರಾಧಹಾಸ್ಟೆಲ್‌ನಲ್ಲಿದ್ದ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ : 2 ವಾರಗಳ ಕಾರ್ಯಾಚರಣೆ ಬಳಿಕ ಶಾಲೆಯ...

ಹಾಸ್ಟೆಲ್‌ನಲ್ಲಿದ್ದ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ : 2 ವಾರಗಳ ಕಾರ್ಯಾಚರಣೆ ಬಳಿಕ ಶಾಲೆಯ ಮಾಲೀಕನ ಅರೆಸ್ಟ್

ಶಾಲೆಯ ಮಾಲೀಕನೊಬ್ಬ ತನ್ನದೇ ಶಾಲೆಯ ಹಾಸ್ಟೆಲ್ ನಲ್ಲಿದ್ದ ವಿದ್ಯಾರ್ಥಿನಿಯನ್ನು ಅತ್ಯಾಚಾರವೆಸಗಿದ್ದ ಪ್ರಕರಣದಲ್ಲಿ  ಪೊಲೀಸರು ಸತತ ಎರಡು ವಾರಗಳಿಗೂ ಹೆಚ್ಚು ಕಾಲ ತನಿಖೆ ನಡೆಸಿ ಕೊನೆಗೆ ಶಾಲೆಯ ಮಾಲೀಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಾನು ಶಾಲೆಯ ಹಾಸ್ಟೆಲ್ ನಲ್ಲಿ ಒಬ್ಬಳೇ ಇದ್ದ ಸಂದರ್ಭದಲ್ಲಿ ಶಾಲೆಯ ಮಾಲೀಕ ತನ್ನ ಮೇಲೆ ಅತ್ಯಾಚಾರ ವೆಸಗಿದ್ದಾನೆ ಎಂದು ಬಾಲಕಿ ತನ್ನ ತಾಯಿಯೊಡನೆ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದರು. ಈ ಸಂಬಂಧ ಪೊಲೀಸರು ಆರೋಪಿಯ ಮೇಲೆ ಏಪ್ರಿಲ್ 30 ರಂದು ಪೋಕ್ಸೋ ಪ್ರಕರಣ ದಾಖಲಿಸಿ ಹಾಗೆಯೇ ಮೂವರು ಅಪರಿಚಿತ ವ್ಯಕ್ತಿಗಳ ವಿರುದ್ಧ ಅಪರಾಧಕ್ಕೆ ಸಹಕರ ನೀಡಿದ ಆರೋಪದ ಮೇಲೆ ದೂರು ದಾಖಲಿಸಿದ್ದರು. ಈ ವಿಷಯ ಸಿಎಂ ಮೋಹನ್‌ ಯಾದವ್ ಅವರ ಗಮನಕ್ಕೆ ಬಂದಿದ್ದರಿಂದ ಎಸ್‌ಐಟಿ ತನಿಖೆಗೆ ಆದೇಶಿಸಿದ್ದರು.

ತನಿಖೆ ಆರಂಭಿಸಿದ ವಿಶೇಷ ತನಿಖಾ ತಂಡ ಎರಡು ವಾರಗಳಿಗೂ ಹೆಚ್ಚು ಕಾಲ ತನಿಖೆ ನಡೆಸಿ ಕೊನೆಗೆ ಶಾಲೆಯ ಮಾಲೀಕರನ್ನು ಬಂಧಿಸಿದ್ದಾರೆ.‌ ಇದೇ ವೇಳೆ ಪ್ರಕರಣ ದಾಖಲಿಸದಂತೆ ಸಂತ್ರಸ್ತೆಯ ತಾಯಿಯ ಮೇಲೆ ಒತ್ತಡ ಹೇರಿದ್ದ ಪೊಲೀಸ್ ಅಧಿಕಾರಿಯನ್ನೂ ಬಂಧಿಸಲಾಗಿದೆ. 8 ವರ್ಷದ ಬಾಲಕಿ ಖಾಸಗಿ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ಓದುತ್ತಿದ್ದಾಳೆ. ಅಲ್ಲದೆ ಸಂತ್ರಸ್ತ ಬಾಲಕಿಯ ತಾಯಿಗೆ ದೂರು ನೀಡದಂತೆ ಒತ್ತಡ ಹೇರಿದ್ದ ಎಸ್‌ಐ ಪ್ರಕಾಶ್ ಸಿಂಗ್ ರಜಪೂತ್ ಅವರನ್ನು ಅಮಾನತುಗೊಳಿಸಲಾಗಿದೆ. ಅಸಲಿಗೆ ಈ ದುಷ್ಕೃತ್ಯ ನಡೆದಿರುವುದು ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ.

RELATED ARTICLES
- Advertisment -
Google search engine

Most Popular