ರಾಮನಗರ: ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿಗೆ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಮಧ್ಯೆ ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದೆ. 20 ವರ್ಷದ ಯುವತಿ ಮೇಲೆ ಯುವಕನೋರ್ವ ಅತ್ಯಾಚಾರವೆಸಗಿರುವಂತಹ ಘಟನೆ ರಾಮನಗರ ತಾಲೂಕಿನ ಬಿಡದಿಯಲ್ಲಿ ನಡೆದಿದೆ. ಸದ್ಯ ಅಸ್ಸಾಂ ಮೂಲದ ಮಂಜೂರ್ ಆಲಂ ಎಂಬಾತನನ್ನು ಬಿಡದಿ ಪೊಲೀಸ್ ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಕ್ಕದ ಮನೆಯವನಿಂದಲ್ಲೇ ಕೃತ್ಯ
ನಿನ್ನೆ ಸಂಜೆ ವೇಳೆ ಸ್ನಾನಕ್ಕೆ ಬಾತ್ರೂಮ್ಗೆ ತೆರಳಿದ್ದ ವೇಳೆ ಯುವತಿಯನ್ನ ತನ್ನ ರೂಮ್ಗೆ ಹೊತ್ತೊಯ್ದು ಕೃತ್ಯವೆಸಗಲಾಗಿದೆ. ಅಸ್ಸಾಂ ಮೂಲದ ಮಂಜೂರ್ ಆಲಂ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಯುವತಿ ಪಕ್ಕದ ಮನೆಯಲ್ಲಿ ವಾಸವಿದ್ದ. ಕೃತ್ಯದ ವೇಳೆ ಯುವತಿ ಕಿರುಚಾಡಿದ್ದಾಳೆ. ಯುವತಿ ಚೀರಾಟ ಕಂಡು ಸ್ಥಳೀಯರು ಓಡಿ ಬಂದಿದ್ದಾರೆ. ಅಷ್ಟರಲ್ಲಿ ಓಡಿ ಹೋಗುತ್ತಿದ್ದ ಆರೋಪಿಯನ್ನು ಸೆರೆ ಹಿಡಿಯಲಾಗಿದೆ.
ಇತ್ತ ಯುವಕನ ಕೋಣೆಯಿಂದ ರಕ್ತಸಿಕ್ತವಾಗಿ ಯುವತಿ ಹೊರಬಂದಿದ್ದಾಳೆ. ಜನನಾಂಗದಿಂದ ರಕ್ತ ಸುರಿಯುತ್ತಿರುವುದನ್ನು ಕಂಡು ಜನರು ಆತಂಕಗೊಂಡಿದ್ದಾರೆ. ಇಡೀ ರಸ್ತೆಯಲ್ಲಿ ರಕ್ತದ ಕಲೆ ಬಿದಿದ್ದು, ಯುವತಿ ಪರಿಸ್ಥಿತಿ ಕಂಡು ಪೊಲೀಸರೇ ಶಾಕ್ ಆಗಿದ್ದಾರೆ.