Saturday, July 20, 2024
Homeಅಪರಾಧಮದುವೆಯಾಗುವುದಾಗಿ ನಂಬಿಸಿ ಪ್ರೇಯಸಿ ಮೇಲೆ ಅತ್ಯಾಚಾರ: ಪೊಲೀಸ್ ಠಾಣೆ​ ಎದುರು ಯುವತಿ ಧರಣಿ

ಮದುವೆಯಾಗುವುದಾಗಿ ನಂಬಿಸಿ ಪ್ರೇಯಸಿ ಮೇಲೆ ಅತ್ಯಾಚಾರ: ಪೊಲೀಸ್ ಠಾಣೆ​ ಎದುರು ಯುವತಿ ಧರಣಿ

ಕೊಪ್ಪಳ: ಮದುವೆಯಾಗುವುದಾಗಿ ನಂಬಿಸಿ ಪ್ರಿಯತಮೆಮೇಲೆ ಅತ್ಯಾಚಾರವೆಸಗಿ ಪರಾರಿಯಾದ ಪ್ರಿಯಕರನ ವಿರುದ್ಧ ಕಾರಟಗಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಂಗಾವತಿ ತಾಲೂಕು ನಿವಾಸಿ ರವಿರಾಜ್ ಅತ್ಯಾಚಾರ ಎಸಗಿದ ಆರೋಪಿ. ಆರೋಪಿ ರವಿರಾಜ್​​ನನ್ನು ಬಂಧಿಸಿ, ನನ್ನ ಜೊತೆ ಮದುವೆ ಮಾಡಿಸಿ ಎಂದು ಸಂತ್ರಸ್ತೆ ಪೊಲೀಸ್ ಠಾಣೆ ಎದುರು ಧರಣಿ ಕುಳಿತಿದ್ದಾಳೆ. 2020ರಲ್ಲಿ ಸಂತ್ರಸ್ತೆ ದ್ವೀತಿಯ ಪಿಯುಸಿ ಓದುವಾಗ ರವಿರಾಜ್​ ಪರಿಚಯವಾಗಿದ್ದಾನೆ. ಪರಿಚಹ ಸ್ನೇಹ, ಸ್ನೇಹ ಪ್ರೀತಿಯಾಗಿ ಬದಾಲಗಿದೆ. ಇಬ್ಬರೂ 2021ರಿಂದ ಪರಸ್ಪರ ಪ್ರೀತಿಸಲು ಆರಂಭಿಸಿದ್ದಾರೆ.

ಈ ವಿಚಾರ ಪ್ರೇಮಿಗಳ ಮನೆಯಲ್ಲಿ ಗೊತ್ತಾಗಿದ್ದು, ಇಬ್ಬರ ಮನೆಯಲ್ಲೂ ವಿರೋಧ ವ್ಯಕ್ತಪಡಿಸಿದ್ದಾರೆ. ಇದಾದ ಬಳಿಕ ಸಂತ್ರಸ್ತೆ ಪ್ರೀತಿ ಬೇಡ ಅಂತ ರವಿರಾಜ್​ನಿಂದ ದೂರು ಉಳಿಯಲು ಆರಂಭಿಸಿದ್ದಾಳೆ. ಆದರೆ ರವಿರಾಜ್​ ಸಂತ್ರಸ್ತೆ ಮೆನೆಯವರ ಮತ್ತು ತನ್ನ ಪೋಷಕರ ಜೊತೆ ಮಾತನಾಡಿ ಮದುವೆಗೆ ಒಪ್ಪಿಸಿದ್ದಾನೆ.

ಬಳಿಕ ರವಿರಾಜ್​ 2021ರ ಮಾರ್ಚ್​​ 17 ರಂದು ರಾತ್ರಿ 8 ಗಂಟೆ ಸುಮಾರಿಗೆ ಸಂತ್ರಸ್ತೆ ಮನೆಗೆ ಹೋಗಿ ಅತ್ಯಾಚಾರ ಎಸಗಿದ್ದಾನೆ. ಇದಾದ ಬಳಿಕ ತಾವು ಇಬ್ಬರೇ ಇರುವ ಖಾಸಗಿ ವಿಡಿಯೋವನ್ನು ಇಟ್ಟುಕೊಂಡು, ರವಿವಾರಜ್​ ಬ್ಲ್ಯಾಕ್​ಮೇಲ್​ ಮಾಡಲು ಆರಂಭಿಸಿದ್ದಾರೆ. ನಂತರ ಅನೇಕ ಸಲ ಸಂತ್ರಸ್ತೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದರಿಂದ ಸಂತ್ರಸ್ತೆ ಗರ್ಭಿಣಿಯಾಗಿದ್ದಾಳೆ. ಆಗ, ರವಿರಾಜ್​ ಗರ್ಭಪಾತ ಮಾಡಿಸಿದ್ದಾನೆ. ಬಳಿಕ ಸಂತ್ರಸ್ತೆ ಮದುವೆ ಮಾಡಿಕೊ ಎಂದು ದುಂಬಾಲು ಬಿದ್ದಿದ್ದಾಳೆ.

RELATED ARTICLES
- Advertisment -
Google search engine

Most Popular