ಕಾರ್ಕಳ : ಕಾರ್ಕಳದಲ್ಲಿ ಹಿಂದೂ ಯುವತಿಯ ಅತ್ಯಾಚಾರ ಮಾನವ ಸಮುದಾಯದ ಮೇಲೆ ನಡೆದಂತಹ ಅತ್ಯಾಚಾರ ಇದನ್ನು ಖಂಡಿತವಾಗಿಯೂ ಸಹಿಸಲು ಸಾಧ್ಯವಿಲ್ಲ ಯುವತಿಯನ್ನು ಪುಸಲಾಯಿಸಿ ಕರೆದೊಯ್ದು ಮಾದಕ ದ್ರವ್ಯ ನೀಡಿ ಅತ್ಯಾಚಾರ ಎಸಗಿರುವುದು ಖಂಡನೀಯ ಎಂದು ಮುಸ್ಲಿಂ ಮುಖಂಡ ಮೊಹಮ್ಮದ್ ಶರೀಫ್ ಹೇಳಿದರು. ಅವರು ಕಾರ್ಕಳದ ಮುಸ್ಲಿಂ ಸಮುದಾಯದ ಪರವಾಗಿ ಕಾರ್ಕಳದ ಪ್ರಕಾಶ್ ಹೋಟೆಲ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮೊಹಮ್ಮದ್ ಶರೀಪ್, ಪ್ರಕರಣಕ್ಕೆ ಸಂಬಂದಿಸಿ ಈಗಾಗಲೇ ಆರೋಪಿ ಅಲ್ತಾಫ್ ಬಂಧನವಾಗಿದೆ. ಇಂತಹ ಅಮಾನವೀಯ ಕೃತ್ಯಕ್ಕೆ ನಾಗರೀಕ ಸಮುದಾಯ ಹೊಣೆಗಾರರಲ್ಲ. ಅಲ್ತಾಫ್ ಓರ್ವ ನಾಮಧಾರಿ ಮುಸ್ಲಿಂ, ಜೀವನದಲ್ಲಿ ಯಾವತ್ತೂ ಮಸೀದಿ ಬಾಗಿಲು ನೋಡಿದವನಲ್ಲ. ಆರೋಪಿ ಅಲ್ತಾಫ್ ನಿಗೆ ಸೂಕ್ತ ಕಾನೂನಿನ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಕಾರ್ಕಳದಲ್ಲಿ ಹಿಂದೂ ಮುಸ್ಲಿಂ ಬೇದಭಾವವಿಲ್ಲದೆ ಸೌಹಾರ್ದತೆಯ ಜೀವನ ನಡೆಸುತ್ತಿದ್ದೇವೆ. ನಾಮದಾರಿ ಮುಸ್ಲಿಂ ನಿಂದ ಇಡೀ ಮುಸ್ಲಿಂ ಸಮುದಾಯಕ್ಕೆ ಕಳಂಕವಾಗಿದೆ. ಮುಸ್ಲಿಂ ಸಮುದಾಯ ಎಂದಿಗೂ ಆತನಿಗೆ ಬೆಂಬಲಿಸುವುದಿಲ್ಲ. ಆತನನ್ನು ಮುಸ್ಲಿಂ ಸಮುದಾಯದಿಂದಲೇ ಬಹಿಷ್ಕರಿಸುವ ಬಗ್ಗೆ ಅಭಿಪ್ರಾಯವಾಗಿದೆ ಎಂದರು.
ಆರೋಪಿ ಈ ಹಿಂದೆ ಹಲವಾರು ಇಂಥದೇ ಪ್ರಕರಣಗಳಲ್ಲಿ ಬಾಗಿಯಾಗಿ ಸಾರ್ವಜನಿಕರಿಂದ ಗೂಸಾ ತಿಂದರೂ
ಅಲ್ತಾಫ್ ಬುದ್ಧಿ ಕಲಿತಿರಲಿಲ್ಲ ಮಾತ್ರವಲ್ಲದೆ ಈ ಹತ್ಯಾಚಾರ ಪ್ರಕರಣದಲ್ಲಿ ಡ್ರಗ್ ಮಾಫಿಯಾಗಳ ಪಾತ್ರ ಎದ್ದು ಕಾಣುತ್ತಿದೆ. ಜಿಲ್ಲೆಯಾದ್ಯಂತ ವ್ಯಾಪಕವಾಗಿ ಕಾರ್ಯಾಚರಿಸುತ್ತಿರುವ ಡ್ರಗ್ ಮ್ಯಾಪಿಯವನ್ನು ಹತ್ತಿಕ್ಕುವ ಕಾರ್ಯವನ್ನು ಪೊಲೀಸ್ ಇಲಾಖೆ ಮಾಡಬೇಕಿದೆ. ಇದಕ್ಕೆ ಪೂರ್ಣ ಪ್ರಮಾಣದ ಸಹಕಾರ ಪೊಲೀಸ್ ಇಲಾಖೆಗೆ ಮುಸ್ಲಿಂ ಸಮುದಾಯದಿಂದ ಸಿಗಲಿದೆ ಎಂದರು.
ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರ ಕಾರ್ಯ ಶ್ಲಾಘನೀಯ ಕೇವಲ ಒಂದೇ ಗಂಟೆಯಲ್ಲಿ ಆರೋಪಿಯನ್ನು ಪತ್ತೆ ಹಚ್ಚಿದ್ದು ಆರೋಪಿಗಳ ಪರವಾಗಿ ಯಾವುದೇ ಮುಸ್ಲಿಂ ನ್ಯಾಯವಾದಿಗಳು ವಾದಿಸದಂತೆ ಅವರು ವಿನಂತಿಸುವುದರ ಜೊತೆಗೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಕಾರ್ಕಳ ಅಧ್ಯಕ್ಷ ಮೊಹಮ್ಮದ್ ಗೌಸ್, ಕಾರ್ಕಳ ಮುಸ್ಲಿಂ ಜಮಾತ್ ಅಧ್ಯಕ್ಷ ಅಶ್ಫಾಕ್ ಅಹಮದ್, ಕರ್ನಾಟಕ ಮುಸ್ಲಿಂ ಜಮಾತ್ ಕಾರ್ಕಳ ಅಧ್ಯಕ್ಷ ನಾಸಿರ್ ಶೇಖ್, ಕಾರ್ಕಳ ಮುಸ್ಲಿಂ ಫೆಡರೇಷನ್ ಅಧ್ಯಕ್ಷ ಶಬ್ಬೀರ್ ಅಹಮದ್ , ಕಾರ್ಕಳ ರೋಟರಿ ಕ್ಲಬ್ ಅಧ್ಯಕ್ಷ ಇಕ್ಬಲ್ ಅಹಮದ್, ಜೆಸಿಸ್ ವಲಯ ಚೇರ್ಮನ್ ಸಮದ್ ಖಾನ್, ಸೇವಾದಳ ಕಾರ್ಕಳ ಅಧ್ಯಕ್ಷ ಅಬ್ದುಲ್ಲಾ ಶೇಖ್ ಉಪಸ್ಥಿತರಿದ್ದರು.