Tuesday, December 3, 2024
Homeಸಾಹಿತ್ಯಅಪರೂಪದ ಲಿಂಗ ಮುದ್ರೆ ಕಲ್ಲು ಪತ್ತೆ

ಅಪರೂಪದ ಲಿಂಗ ಮುದ್ರೆ ಕಲ್ಲು ಪತ್ತೆ


ಇತಿಹಾಸ ಮತ್ತು ಪುರಾತತ್ವ ಶಾಸ್ತ್ರಜ್ಞ ಹಾಗೂ ಶಿವಮೊಗ್ಗದ ಮಲೆನಾಡು ಇತಿಹಾಸ ಸಂಶೋಧನೆ ಮತ್ತು ಅಧ್ಯಯನ ವೇದಿಕೆಯ ಅಧ್ಯಕ್ಷ ಡಾಕ್ಟರ್ ಎಸ್‌.ಜಿ.ಸಾಮಕ್ ಅವರು ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಸಾಸ್ತಾನ -ಪಾಂಡೇಶ್ವರ ಗ್ರಾಮದ ಚಡಗರ ಕೇರಿಯ ಶ್ರೀ ವಿನಾಯಕ ದೇವಸ್ಥಾನದ ಮುಂಭಾಗದಲ್ಲಿ ಅಪರೂಪದ ಲಿಂಗ ಮುದ್ರೆ ಕಲ್ಲನ್ನು ಪತ್ತೆ ಹಚ್ಚಿದ್ದಾರೆ. ಸುಮಾರು 14 15ನೇ ಶತಮಾನಕ್ಕೆ ಸೇರಿರುವ ಕಣ ಶಿಲೆಯ ಈ ಕಲ್ಲು ಆಯತಾಕಾರದಲ್ಲಿದೆ( 34 ಸೆಂಟಿಮೀಟರ್ ಅಗಲ ಹಾಗೂ 19 ಸೆಂಟಿಮೀಟರ್ ದಪ್ಪ). ಇದರ ಉದ್ದ 94 ಸೆಂಟಿಮೀಟರ್. ಕಲ್ಲಿನ ಮುಂಭಾಗದ ಅಗಲ ಮುಖದ ಮೇಲೆ ಸೂರ್ಯ ಚಂದ್ರರ ಸಹಿತ ಶಿವಲಿಂಗದ ಉಬ್ಬು ಶಿಲ್ಪವಿದೆ. ಇದರ ಬಲಬದಿಯ ಸಣ್ಣ ಮುಖದ ಮೇಲೆ 55 ಸೆಂಟಿಮೀಟರ್ ಉದ್ದ ಹಾಗೂ 5 ಸೆಂಟಿಮೀಟರ್ ಅಗಲದ ಅಳತೆ ಕೊಲಿನ ಉಬ್ಬು ಶಿಲ್ಪವಿದೆ. ಹಿಂದೆ ಭೂದಾನ ನೀಡುವ ಸಂದರ್ಭದಲ್ಲಿ ಲಿಂಗ ಮುದ್ರೆ ಅಥವಾ ವಾಮನ ಮುದ್ರೆ ಕಲ್ಲುಗಳನ್ನು ನಿಲ್ಲಿಸುವ ಪರಿಪಾಠವಿತ್ತು.

ಕರ್ನಾಟಕದಲ್ಲಿ ಈ ರೀತಿಯ ನೂರಾರು ಕಲ್ಲುಗಳು ದೊರೆತಿದ್ದರೂ ಅಳತೆ ಕೊಲಿನ ಸಹಿತ ಇರುವ ಲಿಂಗ ಮುದ್ರೆ ಕಲ್ಲು ಇಲ್ಲಿ ದೊರೆತಿರುವುದು ರಾಜ್ಯದಲ್ಲೇ ಪ್ರಪ್ರಥಮ. ಹೆಚ್ಚಿನ ಅಧ್ಯಯನ ಮುಂದುವರೆದಿದೆ. ಈ ಕ್ಷೇತ್ರ ಕಾರ್ಯದಲ್ಲಿ ಶ್ರೀ.ಪಿ.ರಾಮಕೃಷ್ಣ ಚಡಗ, ಅಧ್ಯಕ್ಷರು, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಸೇವಾ ಸಂಘ(ರಿ ), ಶ್ರೀ ವಿನಾಯಕ ದೇವಸ್ಥಾನ ಚಡಗರ ಮಠ, ಸಾಸ್ತಾನ- ಪಾಂಡೇಶ್ವರ, ಕೋಶಾಧಿಕಾರಿಗಳು ಶ್ರೀ. ಪಿ.ಸಿ.ಹೊಳ್ಳ ಹಾಗೂ ಶ್ರೀ. ಪಿ. ಹೆಚ್. ಅರವಿಂದ ಶರ್ಮ, ಮಾಜಿ ಅಧ್ಯಕ್ಷರು, ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್ ಇವರುಗಳು ಮಾಹಿತಿ ನೀಡಿ ಸಹಕರಿಸಿದ್ದಾರೆ

RELATED ARTICLES
- Advertisment -
Google search engine

Most Popular