Friday, May 16, 2025
Homeಧಾರ್ಮಿಕಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ರಾಶಿ ಪೂಜೆ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ರಾಶಿ ಪೂಜೆ

ಕಟೀಲು :ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ರಾಶಿಪೂಜೆ ಗುರುವಾರ ಧಾರ್ಮಿಕ ವಿಧಿಗಳೊಂದಿಗೆ ಜರುಗಿತು. ಈ ಸಂದರ್ಭ 12 ರಾಶಿಗಳ ವಿಶೇಷ ಸಾಂಪ್ರದಾಯಿಕ ಪೂಜೆ ಹಾಗೂ ನಿರಂತರ ತಾಳದ ಭಜನಾ ಸಂಕೀರ್ತಣೆ ನಡೆಯಿತು. ಅರ್ಚಕ ಕೆ.ಲಕ್ಷ್ಮೀನಾರಾಯಣ ಅಸ್ರಣ್ಣ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿಗಳು ಜರುಗಿದವು. ಬಳಿಕ ಭೋಜನ ಶಾಲೆಯಲ್ಲಿ ಪಲ್ಲಪೂಜೆ ನಡೆದು ಅನ್ನಪ್ರಸಾದ ವಿತರಣೆ ನಡೆಯಿತು.

RELATED ARTICLES
- Advertisment -
Google search engine

Most Popular