ಜನ್ಮ ಭೂಮಿ ಸೇವಾ ಟ್ರಸ್ಟ್ ನ ತಳಹದಿಯಲ್ಲಿರುವ ಕಾರ್ಕಳ ಬೈಲೂರಿನ ನಚಿಕೇತ ವಿದ್ಯಾಲಯದಲ್ಲಿ ರಾಷ್ಟ್ರಮಾತಾ ಅಹಲ್ಯಾ ಬಾಯಿ ಹೊಳ್ಕರ್ ರವರ 300ನೇ ಜನ್ಮದಿನೋತ್ಸವ ದಿನಾಂಕ 28-10-2024 ರಂದು ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಗ್ರಾಮ ವಿಕಾಸ ಗಿತಿವಿಧಿಯ ವಿಭಾಗದ ಪ್ರಮುಖರಾದ ಶ್ರೀಮತಿ ರಮಿತಾ ಶೈಲೇಂದ್ರ ಕಾರ್ಕಳ ಇವರು ಅಹಲ್ಯಾಬಾಯಿ ಹೊಳ್ಕರ್ ರವರ ಜೀವನ ಚರಿತ್ರೆಯ ಬಗ್ಗೆ ಬೌದ್ಧಿಕ್ ನೀಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕರಾದ ಡಿ. ಮಚ್ಚೇಂದ್ರ ನಾಥ್, ಮುಖ್ಯೋಪಾಧ್ಯಾಯನಿಯಾದ ಕವಿತಾ ವಿ ಶೆಣೈ, ಸಂಸ್ಥೆಯ ಮಾತೃ ಭಾರತಿಯ ಅಧ್ಯಕ್ಷರಾದ ದೀಕ್ಷಿತಾ ರಾವ್, ಹಾಗೂ ಮಾತೃ ಭಾರತಿಯ ಎಲ್ಲಾ ಸದಸ್ಯರು, ವಿದ್ಯಾಲಯದ ಶಿಕ್ಷಕ – ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.