Wednesday, February 19, 2025
Homeಬೆಂಗಳೂರುಆಚಾರ್ಯ ಪದವಿ ಪೂರ್ವ ಕಾಲೇಜುನಲ್ಲಿ ರಥಸಪ್ತಮಿ ಯೋಗೋತ್ಸವ

ಆಚಾರ್ಯ ಪದವಿ ಪೂರ್ವ ಕಾಲೇಜುನಲ್ಲಿ ರಥಸಪ್ತಮಿ ಯೋಗೋತ್ಸವ

ಬೆಂಗಳೂರು: ರಥಸಪ್ತಮಿಯ ಅಂಗವಾಗಿ ನರಸಿಂಹರಾಜ ಕಾಲೋನಿ,ಪದವಿ ಪೂರ್ವ ಕಾಲೇಜಿನಲ್ಲಿ ರಥಸಪ್ತಮಿ ಯೋಗೋತ್ಸವ-2025 ಅಂಗವಾಗಿ 108 ಬಾರಿ ಸೂರ್ಯ ನಮಸ್ಕಾರ ಆಸನ ಮಾಡುವ ಮೂಲಕ ವಿದ್ಯಾರ್ಥಿಗಳು ಪಥ ಬದಲಿಸಿದ ಸೂರ್ಯನಿಗೆ ನಮನ ಸಲ್ಲಿಸಿದರು.

ಎಪಿಎಸ್ ಸಂಸ್ಥೆಯ ಅಧ್ಯಕ್ಷರಾದ ಡಾ.ಸಿ.ಎ.ವಿಷ್ಣುಭರತ್‌ ಅಲಂಪಲ್ಲಿ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸದ ಮಹತ್ವ, ಸೂರ್ಯನ ಕುರಿತ ಧಾರ್ಮಿಕ ಹಾಗೂ ಸಾಂಕೇತಿಕ ಶ್ರದ್ಧೆ, ಆಚರಣೆಗಳ ಕುರಿತು ರಥಸಪ್ತಮಿಯ ಮಹತ್ವ ಬಗ್ಗೆ ವಿವರಿಸಿದರು.

ಈ ಸಮಾರಂಭದಲ್ಲಿ ಕಾಲೇಜಿನ ಗೌರ್ನಿಂಗ್‌ ಕೌನ್ಸಿಲ್‌ ಛೇರ್ಮನ್‌ರಾದ ಡಾ.ಟಿ.ವಿ,ಗುರುದೇವಯ್ಯ, ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ.ಎಸ್‌, ಉಪಪ್ರಾಂಶುಪಾಲರಾದ ರಂಜನಿ.ಹೆಚ್.ಎಸ್.‌ ಯೋಗ ಶಿಕ್ಷಕಿ ಧನಲಕ್ಷ್ಮೀ.ಸಿ.ಪಿ, ಕಾಲೇಜಿನ ಉಪನ್ಯಾಸಕರು ಹಾಗೂ ಬೋಧಕೇತರವರ್ಗದವರು ಹಾಗೂ ಮುಖ್ಯವಾಗಿ 100 ಜನ ವಿದ್ಯಾರ್ಥಿಗಳು ಭಾಗವಹಿಸಿದ್ದರು.. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಮಾಣಪತ್ರ ವಿತರಿಸಲಾಯಿ

RELATED ARTICLES
- Advertisment -
Google search engine

Most Popular