ಕಾರ್ಕಳ ತಾಲೂಕಿನ ಇತಿಹಾಸ ಪ್ರಸಿದ್ಧ ಕಾಂತಾವರದಲ್ಲಿ ಕಾಂತೇಶ್ವರ ಸ್ವಾಮಿಯ ಮಹಾರಥೋತ್ಸವ ಜ.21 ರಂದು ಜರಗಿತು.
ಪ್ರಧಾನರ್ಚಕರಾದ ಕೃಷ್ಣಮೂರ್ತಿ ಭಟ್ಟರ ಮಾರ್ಗದರ್ಶನದಲ್ಲಿ , ಧರ್ಮದರ್ಶಿ ಡಾ. ಕೆ. ಜೀವಂಧರ ಬಲ್ಲಾಳರ ಉಪಸ್ಥಿತಿಯಲ್ಲಿ ಊರ ಪರವೂರ ಭಕ್ತರ ಸಹಕಾರದಿಂದ ಒಂಬತ್ತು ದಿನಗಳ ಜಾತ್ರೆ ಸಂಪನ್ನವಾಯಿತು. ಉತ್ಸವದಂಗವಾಗಿ ಯಕ್ಷಗಾನ, ಭರತ ನಾಟ್ಯ, ರಸಮಂಜರಿ, ನಾಟಕ,, ಸುಗಮ ಸಂಗೀತ, ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು
ಉತ್ಸವ ಸಮಿತಿ ಅಧ್ಯಕ್ಷ ರಾದ ಜಯವರ್ಮ ರಾಜ್ ಬಲ್ಲಾಳ್, ರಾಜವರ್ಮ ರಾಜ್ ಬಲ್ಲಾಳ್, ಕಾರ್ಕಳ ಕ್ಷೇತ್ರದ ಶಾಸಕರಾದ ವಿ. ಸುನಿಲ್ ಕುಮಾರ್, ಡಿ.ಸಿ.ಸಿ.ಭ್ಯಾಂಕಿನ ನಿರ್ದೇಶಕ ರಾದ ಭಾಸ್ಕರ ಎಸ್ ಕೋಟ್ಯಾನ್, ಎಕ್ಸೆಲೆಂಟ್ ಕಾಲೇಜಿನ ಅದ್ಯಕ್ಷ ರಾದ ಯುವರಾಜ್ ಜೈನ್ ಅಶೋಕಾನಂದ ಶೆಟ್ಟಿ ಬೇಲಾಡಿ, ರಮಾನಂದ ಶೆಟ್ಟಿ ಮುಂಬಯಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು