Friday, March 21, 2025
Homeಬಂಟ್ವಾಳಸತತ 5 ನೇ ಬಾರಿಗೆ ನರಿಕೊಂಬು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ರವಿ ಅಂಚನ್ ಅಬೆರೋಟ್ಟು ಆಯ್ಕೆ

ಸತತ 5 ನೇ ಬಾರಿಗೆ ನರಿಕೊಂಬು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ರವಿ ಅಂಚನ್ ಅಬೆರೋಟ್ಟು ಆಯ್ಕೆ

ಬಂಟ್ವಾಳ : ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನರಿಕೊಂಬು ಇದರ ನೂತನ ಅಧ್ಯಕ್ಷರಾಗಿ 5 ನೇ ಬಾರಿಗೆ ರವಿ ಅಂಚನ್ ಅಬೆರೊಟ್ಟು ಆಯ್ಕೆಯಾಗಿದ್ದಾರೆ.

ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಶಾಲಾ ಪೋಷಕರ ಸಭೆಯಲ್ಲಿ ಆಯ್ಕೆ ಮಾಡಲಾಯಿತು.

ಉಳಿದಂತೆ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾಗಿ ಲಕ್ಷ್ಮಿ ಪ್ರಕಾಶ್,ಸದಸ್ಯರುಗಳಾಗಿ ದಾಮೋದರ್,ಕಮಲಾಕ್ಷ, ನವೀನ್ , ಪ್ರಮೋದ್, ಜಯಪ್ರಕಾಶ್,ಶಶಿಕಲಾ,ಜಯಶ್ರೀ,ಪ್ರಿಯಾ,ಸುಂದರಿ,ತ್ರಿವೇಣಿ,ಮೀನಾಕ್ಷಿ, ಚಿತ್ರಾಕ್ಷಿ, ದಿವ್ಯಾ ಕೆ , ಮೇಘಶ್ರೀ,ಜಯಶ್ರೀ ಶೆಟ್ಟಿ, ಕೇಶವ, ಆಯ್ಕೆಯಾದರು.

ಸಮಿತಿಯ ಕಾರ್ಯದರ್ಶಿಯಾಗಿ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಸುಜಾತ, ಪದನಿಮಿತ ಸದಸ್ಯರುಗಳಾಗಿ ಆರೋಗ್ಯ ಕಾರ್ಯಕರ್ತೆ ಸುಮತಿ, ಅಂಗನವಾಡಿ ಕಾರ್ಯಕರ್ತೆ ಜಿನ್ನಮ್ಮ, ನಾಮ ನಿರ್ದೇಶಿತ ಸದಸ್ಯರುಗಳಾಗಿ ಸ್ಥಳೀಯ ಪಂಚಾಯತ್ ಸದಸ್ಯ ರಂಜಿತ್ ಕೆದ್ದೇಲ್, ಹಿರಿಯ ಶಿಕ್ಷಕಿ ಶೋಭಾ, ವಿದ್ಯಾರ್ಥಿ ಪ್ರತಿನಿಧಿ ವಿದೀಶ್, ರವರನ್ನು ಆಯ್ಕೆ ಮಾಡಲಾಯಿತು.

RELATED ARTICLES
- Advertisment -
Google search engine

Most Popular