ಕೊಂಕಣಿ ಭಾಷೆಯನ್ನು ಕಟ್ಟಿ ಬೆಳೆಸಿದವರಲ್ಲಿ ಅಗ್ರಮಾನ್ಯರೆನಿಸುವ, ಕೊಂಕಣಿ ಸಾಹಿತಿಯೊಬ್ಬನಿಗೆ ಪ್ರಥಮ ಜ್ಞಾನಪೀಠ ಹಾಗೂ ಪ್ರಥಮ ಪದ್ಮವಿಭೂಷಣ ತಂದುಕೊಟ್ಟ ರವೀಂದ್ರ ಕೇಳೇಕರ್-ರವರ ಜನ್ಮಶತಾಬ್ದಿಯನ್ನು ಮಂಗಳೂರಿನ ವಿಶ್ವಕೊಂಕಣಿ ಕೇಂದ್ರದಲ್ಲಿ ಆಚರಿಸುವುದು ಅವರ ರಾಷ್ಟ್ರೀಯ ಖ್ಯಾತಿಯ ದ್ಯೋತಕವಾಗಿದೆಯೆಂದು ಗೋವಾ ರಾಜ್ಯದ ಭಾಷಾ ನಿರ್ದೇಶಕ ಶ್ರೀ ಪ್ರಶಾಂತ ಶಿರೋಡಕರ ಹೇಳಿದರು. ಅವರು ಕೇಳೆಕರ್-ರವರ ಶತಾಬ್ದಿ ಸಮಾರಂಭ ಉದ್ಘಾಟಿಸಿ ಗಾಂಧೀ-ಲೊಹಿಯಾ ಚಿಂತಕ, ಸ್ವಾತಂತ್ರ್ಯ ಹೊರಾಟಗಾರರಾಗಿದ್ದ ಕೇಳೆಕರ್ ಚಿಂತನೆಯ ಪ್ರಚುರ ಪಡಿಸುವ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಿಶ್ವಕೊಂಕಣಿ ಕೇಂದ್ರದ ಅಧ್ಯಕ್ಷ ಸಿ ಎ ನಂದಗೋಪಾಲ್ ಶೆಣೈಯವರು ಅಧ್ಯಕ್ಷತೆ ವಹಿಸಿ ಅತಿಥಿಗಳನ್ನು ಸ್ವಾಗತಿಸಿದರು. ಮುಖ್ಯ ಅತಿಥಿಯಾದ ಹೆಸರಾಂತ ಕೊಂಕಣಿ ಲೇಖಕಿ ಶೀಲಾ ಕೊಳಂಬ್ಕಾರ್, ಮುಂಬಯ್ ಇವರು ಕೇಳೆಕರ್-ರವರು ಸಾಹಿತಿಗಳನ್ನು ಹುರಿದುಂಬಿಸುತ್ತಿದ್ದ ರೀತಿಯನ್ನು ನೆನೆವರಿಸಿಕೊಂಡರು. ಕಾರ್ಯದರ್ಶಿ ಡಾ ಕಸ್ತೂರಿ ಮೋಹನ್ ಪೈಯವರು ಅತಿಥಿಗಳನ್ನು ಪರಿಚಯಿಸಿದರು ಹಾಗೂ ಕೋಶಾಧಿಕಾರಿ ಬಿ. ಆರ್. ಭಟ್ ವಂದಿಸಿದರು. ಉಪಾಧ್ಯಕ್ಷರಾದ ರಮೇಶ್ ನಾಯಕ್, ಡಾ ಕಿರಣ್ ಬುಡ್ಕುಳೆ ಉಪಸ್ಥಿತರಿದ್ದರು. ಕೇಳೆಕರ್-ರವರ ಸುಪುತ್ರ ಗೀರಿಶ್ ಕೇಳೆಕರ್, ಹಾಗೂ ಮನೋಹರ ಸರ್ದೆಸಾಯ್ ಇವರ ಸುಪುತ್ರ ಸುನಿಲ್ ಸರ್ದೆಸಾಯ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದರು. ಗೋವಾದ ಹೆಸರಾಂತ ಕೊಂಕಣಿ ನೇತಾರರಾದ ಉದಯ್ ಭೆಂಬ್ರೆ ಇವರು ತಮ್ಮ ಬೀಜಭಾಷಣದಲ್ಲಿ ಕೇಳೆಕರ್ ವ್ಯಕ್ತಿತ್ವದ ವಿವಿಧ ಆಯಾಮಗಳನ್ನು ವಿವರಿಸಿದರು.
ಪೂ: 11.00 ರಿಂದ ಹೆಸರಾಂತ ಲೇಖಕಿ ಶೀಲಾ ಕೊಳಾಂಬಕರ ಅವರ ಅಧ್ಯಕ್ಷತೆಯಲ್ಲಿ ನಡೆದ “ರವೀಂದ್ರ ಕೇಳೆಕರ್: ಸ್ಪೂರ್ತಿ ಮತ್ತು ಸೃಜನಶೀಲತೆ”ಯೆಂಬ ವಿಷಯದಲ್ಲಿ ವಿಚಾರಗೋಷ್ಟಿ ನಡೆಯಲಿದ್ದು, ಡಾ ಜಯಂತಿ ನಾಯಕ್, ಚೇತನ್ ಆಚಾರ್ಯ, ಹೆಚ್.ಎಮ್. ಪೆರ್ನಾಳ್, ಹಾಗೂ ವೆಂಕಟೇಶ್ ನಾಯಕ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು. ಕೇಳೆಕರ್-ರವರು ಹೇಗೆ ಸಾಹಿತ್ಯ, ಭಾಷೆಯ ಕಡೆಗೆ ಯುವಜನರನ್ನು ಸೆಳೆಯುತ್ತಿದ್ದರುಯೆಂಬ ವಿಚಾರವೇ ಪ್ರಧಾನವಾಗಿ ಚರ್ಚಿತವಾಯಿತು.
ಮಧ್ಯಾಹ್ನ 12.00 ಕ್ಕೆ ಹಿರಿಯ ಸಾಹಿತಿ ಗೋಕುಲದಾಸ ಪ್ರಭುರವರ ಅಧ್ಯಕ್ಷತೆಯಲ್ಲಿ “ಭೂಮಿ, ಭಾಷೆ, ಸಮಾಜದ ಕುರಿತು ರವೀಂದ್ರ ಕೇಳೆಕರರ ಬದ್ಧತೆ” ಯೆಂಬ ವಿಷಯದಲ್ಲಿ ವಿಚಾರಗೋಷ್ಟಿ ನಡೆಯಿತು. ಪ್ರಕಾಶ್ ನಾಯಕ್, ಡಾ ಬಿ ದೇವದಾಸ ಪೈ, ಸಲೀಮಾ ಕೊಥಾರೆ, ಚಂದ್ರಿಕಾ ಮಲ್ಲ್ಯ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು. ಭಾಷೆಯ ಬಗ್ಗೆ ಕೇಳೆಕರ್-ರವರು ಪ್ರತಿಪಾದಿಸುತ್ತಿದ್ದ ವಿಶಾಲ ದೃಷ್ಟಿಕೋನ, ಎಲ್ಲಾ ಭಾಷೆಗಳಿಗೆ ಸಮಾನ ಸ್ಥಾನಮಾನ, ಕೊಂಕಣಿ ಭಾಶೆ- ಕೊಂಕಣಿ ಸಮಾಜದ ಸ್ಥಿತಿಗತಿ – ಮಾತೃಭಾಷಿಕರು ಶಾಲೆಗಳಲ್ಲಿ ಕೊಂಕಣಿ ಕಲಿಕೆಗೆ ಹಿಂಜರಿಯುವುದು, ಬೇರೆ ಬೇರೆ ರಾಜ್ಯಗಳಲ್ಲಿ ಈ ಬಗ್ಗೆ ತೋರುತ್ತಿದ್ದ ಅಸಡ್ಡೆಇಂತಹ ವಿಚಾರಗಳನ್ನು ಚರ್ಚಿಸಲಾಯಿತು.
ಅಪ: 2.00 ಕ್ಕೆ “ರವೀಂದ್ರ ಕೇಳೆಕರ್: ಹೋರಾಟ ಮತ್ತು ಸಾಧನೆ”ಈ ವಿಷಯದ ಬಗ್ಗೆ ಡಾ. ಕಿರಣ ಬುಡ್ಕುಳೆ ಇವರು ಗೋವಾದ ಹೆಸರಾಂತ ಪತ್ರಕರ್ತ ದಿಲೀಪ್ ಬೊರ್ಕರ್, ಗಿರೀಶ್ ಕೇಳೆಕರ್, ಹಾಗೂ ಪೂನಮ್ ಬುರ್ಯೆ ಇವರುಗಳೊಡನೆ ಅರ್ಥಪೂರ್ಣ ಸಂವಾದ ನಡೆಸಿಕೊಟ್ಟರು.
“ಕೇಳೆಕರ್- ಸಾಹಿತ್ಯದ ಓದು” ಕಾರ್ಯಕ್ರಮದಲ್ಲಿ ವೆಂಕಟೇಶ್ ಎನ್ ಬಾಳಿಗಾ ಇವರ ನೇತೃತ್ವದಲ್ಲಿ ಎಮ್.ಎ. ಕೊಂಕಣಿ ವಿದ್ಯಾರ್ಥಿಗಳು ಕೇಳೆಕರರ ವಿವಿಧ ಪುಸ್ತಕಗಳಿಂದ ಆರಿಸಿದ ಭಾಗಗಳನ್ನು ವಾಚಿಸಿದರು.
ರವೀಂದ್ರ ಕೇಳೆಕರರ ಬದುಕು ಮತ್ತು ಕೊಡುಗೆಗೆ ಸಂಬಂಧಿಸಿ, ದಿಲಿಪ್ ಬೋರ್ಕರ್ ಹಾಗೂ ಕೇಂದ್ರ ಸಾಹಿತ್ಯ ಆಕಾಡೆಮಿಯವರು ನಿರ್ಮಿಸಿರುವ ಎರಡು ಬೇರೆ ಬೇರೆ ಡೊಕ್ಯುಮೆಂಟರಿಗಳನ್ನು ಪ್ರದರ್ಶಿಸಲಾಯಿತು. ದಿನಪೂರ್ತಿ ನಡೆದ ಕಾರ್ಯಕ್ರಮಗಳ ಬಗ್ಗೆ ಸಭಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.