Monday, July 15, 2024
Homeಕಾರ್ಕಳರಾಮಾಯಣ ಓದುದರಿಂದ ರಾಮ ರಾಜ್ಯವಾಗುವುದಿಲ್ಲ: ಕಮಲಾಕ್ಷ ಕಾಮತ್

ರಾಮಾಯಣ ಓದುದರಿಂದ ರಾಮ ರಾಜ್ಯವಾಗುವುದಿಲ್ಲ: ಕಮಲಾಕ್ಷ ಕಾಮತ್

ಕಾರ್ಕಳ : ಕೇವಲ ರಾಮಾಯಣ ಓದಿದ ಮಾತ್ರಕ್ಕೆ ರಾಮರಾಜ್ಯವಾಗಲು ಸಾಧ್ಯವಿಲ್ಲ. ರಾಮನ ಆದರ್ಶ, ಕ್ಷಮಾಗುಣ, ಶಾಂತಿ , ಪ್ರೀತಿ, ಸೌಹಾರ್ದ, ಸಹಾಯ ಸೇವೆಯ ಮೂಲಕ ರಾಮರಾಜ್ಯ ಸಾಧ್ಯ ಈ ಮೂಲಕ ನಮ್ಮ ಬಾಳು ಬಂಗಾರವಾಗುತ್ತದೆ ಎಂದು ವಿಶ್ರಾಂತ ಲೆಕ್ಕ ಪರಿಶೋಧಕ, ಕೊಡುಗೈ ದಾನಿ ಕಾರ್ಕಳ ಕಮಲಾಕ್ಷ ಕಾಮತ್ ನುಡಿದರು.
ಅವರು ಕಾರ್ಕಳದ ಸುಮೇಧ ಫ್ಯಾಶನ್ ಇನ್ಸ್ಟಿಟ್ಯೂಟ್ ನಲ್ಲಿ ಶ್ರೀನಿವಾಸ ಸೇವಾ ಟ್ರಸ್ಟ್ ಹಾಗೂ ಸುಮೇಧ ಫ್ಯಾಶನ್ ಇನ್ಸ್ಟಿಟ್ಯೂಟ್ ಆಶ್ರಯದಲ್ಲಿ ಕಾರ್ಕಳ ರಮಾಬಾಯಿ ಮತ್ತು ಕಾರ್ಕಳ ಮೀರ ಕಾಮತ್ ಅವರ ಸವಿನೆನಪಿಗಾಗಿ ಆಯೋಜಿಸಿದ ಒಂದು ವಾರಗಳ ಉಚಿತ ಫ್ಯಾಶನ್ ಡಿಸೈನಿಂಗ್ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ನೀನು ಏನು ಮಾಡುತ್ತಿದ್ದೆ ಅದು ನಿನಗೆ ಆಗುತ್ತದೆ ನೀನು ಏನು ಕೊಡುತಿಯ ಅದು ನಿಮಗೆ ತಿರುಗಿ ಬರುತ್ತದೆ ಎಂದರು ನೀವು ಸತ್ಕಾರ್ಮವನ್ನೇ ಮಾಡಿ ಕೋಪ, ಮೋಸ ಮದ , ಮತ್ಸರಗಳನ್ನು ಬಿಟ್ಟು ಬಿಡಿ. ಮನುಷ್ಯನಿಗೆ ಕಷ್ಟಗಳು ಬರುವುದು ಸಹಜ ನಾವು ನಮಗಿಂತ ಕೆಳಗಿರುವವರನ್ನು ನೋಡುವ ನಮ್ಮ ಕರ್ಮ ಹಾಗೂ ಕರ್ತವ್ಯಗಳನ್ನು ಮಾಡಿ ನಂತರ ದೇವರ ಮೊರೆ ಹೋಗುವ ಆಗ ನಿಮಗೆ ಸೂಕ್ತ ಪ್ರತಿಫಲ ಸಿಗುತ್ತದೆ ಯೆಂದ ಅವರು ಎಲ್ಲಾ ಮಹಾನ್ ಪುರುಷರು ಬೇರೆಯವರಿಗಾಗಿ ಬದುಕಿದವರು ನಾವು ಕೂಡ ಹಾಗೆಯೇ ಬದುಕೋಣ ಎಂದರು.

ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಸುಮೇಧ ಫ್ಯಾಶನ್ ಇನ್ಸ್ಟಿಟ್ಯೂಟ್ ಸಂಸ್ಥಾಪಕಿ ಸಾಧನ ಜಿ. ಅಶ್ರಿತ್ ಮಹಿಳೆಯರು ಸ್ವಾವಲಂಬಿಯಾಗಿ ಬದುಕಬೇಕು. ಪ್ರಯತ್ನಪಟ್ಟರೆ ಯಶಸ್ಸು ಖಂಡಿತವಾಗಿಯೂ ಸಿಗುತ್ತದೆ. ನಮ್ಮಲ್ಲಿರುವ ಅಮೂಲ್ಯವಾದ ವಿದ್ಯಾ ಸಂಪತ್ತನ್ನು ವಿದ್ಯಾರ್ಥಿಗಳಿಗೆ ದಾರೆ ಎರೆಯುವುದರ ಮೂಲಕ ವಿದ್ಯಾರ್ಥಿನಿಯರ ಬದುಕನ್ನು ಹಸನಾಗಿಸುವ ಕಾರ್ಯವನ್ನು ಮಾಡಬೇಕು. ಅನಾಥ ನಿರ್ಗತಿಕ ಮಕ್ಕಳ ಸೇವೆ ಮಾಡುವ ಮೂಲಕ ಅನಾಥ ಆಶ್ರಮಗಳ ಕುಂದು ಕೊರತೆಗಳಿಗೆ ಎಲ್ಲರೂ ಸ್ಪಂದಿಸಬೇಕು ಎಂದರು
ಈ ಸಂದರ್ಭದಲ್ಲಿ ಸುಮೇಧ ಫ್ಯಾಶನ್ ಇನ್ಸ್ಟಿಟ್ಯೂಟ್ ಶಿಕ್ಷಕಿ ನವ್ಯ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular