ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಆಗಿರುವ ರಿಯಲ್ ಮಿ ದೇಶದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ನೊಂದಿಗೆ ಬಹುನಿರೀಕ್ಷಿತ ‘ರಿಯಲ್ ಮಿ ಜಿಟಿ 7 ಪ್ರೊ’ ಅನ್ನು ಬಿಡುಗಡೆಗೊಳಿಸಿದೆ.
ಇದನ್ನು ‘ಬಾರ್ನ್ ಟು ಎಕ್ಸೀಡ್’ ಎಂಬ ಧ್ಯೇಯವಾಕ್ಯದೊಂದಿಗೆ ವಿನ್ಯಾಸಗೊಳಿಸಲಾಗಿದೆ.
ಛಾಯಾಗ್ರಹಣ ಉತ್ಸಾಹಿಗಳಿಗಾಗಿ, ರಿಯಲ್ ಮಿ ಜಿಟಿ 7 ಪ್ರೊ ಸೋನಿ IMX882 ಪೆರಿಸ್ಕೋಪ್ ಕ್ಯಾಮೆರಾ ಇರಲಿದೆ. ಮೊದಲ ಎಐ ಅಂಡರ್ ವಾಟರ್ ಫೋಟೋಗ್ರಫಿ ಮೋಡ್ ಅನ್ನು ಪರಿಚಯಿಸುತ್ತದೆ. ಇದರಿಂದ ಬಳಕೆದಾರರಿಗೆ ಅದ್ಭುತ ಚಿತ್ರಗಳನ್ನು ಸೆರೆಹಿಡಿಯಲು ನೆರವಾಗಲಿದೆ.
ರಿಯಲ್ ವರ್ಲ್ಡ್ ಇಕೋ² ಡಿಸ್‌ಪ್ಲೇಯನ್ನು ಒಳಗೊಂಡಿದೆ. ಇದನ್ನು ಸ್ಯಾಮ್‌ಸಂಗ್ ಡಿಸ್‌ಪ್ಲೇಯೊಂದಿಗೆ ಸಹ ಅಭಿವೃದ್ಧಿಪಡಿಸಲಾಗಿದೆ. ಡಾಲ್ಬಿ ವಿಷನ್ ವೈಶಿಷ್ಟ್ಯವು ಒಳಗೊಂಡಿರಲಿದೆ.
ಜಿಟಿ 7 ಪ್ರೊ ನೆಕ್ಸ್ಟ್ ಎಐ ಎಂಬ ಸುಧಾರಿತ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ವ್ಯವಸ್ಥೆಯನ್ನು ಸಹ ಪರಿಚಯಿಸುತ್ತದೆ.ಇದಲ್ಲದೆ, ರಿಯಲ್ ಮಿ ಜಿಟಿ 7 ಪ್ರೊ ತನ್ನ ಎಐ ಮೋಷನ್ ಡೆಬ್ಲರ್ ತಂತ್ರಜ್ಞಾನ ಹೊಂದಿರಲಿದೆ.
5800mAh ಬ್ಯಾಟರಿ ಮತ್ತು 120W ಸೂಪರ್ ವೂಕ್ ಚಾರ್ಜಿಂಗ್ ಸಂಯೋಜನೆಯೊಂದಿಗೆ ಲಭ್ಯವಾಗಲಿದೆ.
ಎರಡು ಅದ್ಭುತ ಬಣ್ಣಗಳಲ್ಲಿ ಲಭ್ಯವಿದೆ: ಮಾರ್ಸ್ ಆರೆಂಜ್ ಮತ್ತು ಗ್ಯಾಲಕ್ಸಿ ಗ್ರೇ
ಸ್ಟೋರೇಜ್/ಬೆಲೆ:
12GB+256GB: 56,999
16GB+512GB: 62,999
ಅಮೆಜಾನ್‌ನಲ್ಲಿ ಪ್ರಿ-ಆರ್ಡರ್ ವೇಳೆ ವಿಶೇಷ ಆಫರ್‌ಗಳು ಸಿಗಲಿವೆ. ಮೊದಲ ಮಾರಾಟದಲ್ಲಿ ₹3000 ಕ್ಯಾಶ್‌ಬ್ಯಾಕ್ ಸಿಗಲಿದೆ.