ಹುಟ್ಟಿದ ಜೀವಿ ಸಾಯಲೇ ಬೇಕು ಎಂಬುದು ಇಲ್ಲಿವರೆಗೆ ಇದ್ದ ನಂಬಿಕೆ ಮತ್ತು ಅದೇ ಅಂತಿಮ ಸತ್ಯ. ಆದರೆ ಅಮೆರಿಕದ ಸಂಸ್ಥೆಯೊಂದು ಈ ಸಿದ್ಧಾಂತವನ್ನು ಸುಳ್ಳು ಮಾಡಲು ಹೊರಟಿದೆ. ಸತ್ತ ವ್ಯಕ್ತಿಯನ್ನು ಮುಂದೊಂದು ದಿನ ಬದುಕಿಸಬಹುದು ಎಂದು ಕಂಪನಿಯೊಂದು ಭರವಸೆ ನೀಡಿದೆ. ನಂಬಿದರೆ ನಂಬಿ, ಬಿಟ್ಟರೆ ಬಿಡಿ, ನಂಬಲಸಾಧ್ಯವಾದರೂ ಸಂಸ್ಥೆ ಮಾತ್ರ ಪಕ್ಕಾ ಭರವಸೆಯಂತೆ ಈ ಭರವಸೆ ನೀಡಿದೆ.
ಅಮೆರಿಕದ ಆಲ್ಕೊರ್ ಲೈಫ್ ಫೌಂಡೇಶನ್ ಈ ಕುರಿತ ಸಂಶೋಧನೆಯಲ್ಲಿ ನಿರತವಾಗಿದೆ. ವಿಶ್ವದ ಅಗ್ರಮಾನ್ಯ ಕ್ರಯೋನಿಕ್ಸ್ ಕಂಪನಿಯಾಗಿದ್ದು, 1,400 ಸದಸ್ಯರನ್ನು ಹೊಂದಿದೆ. ಈ ಕಂಪನಿ ಸತ್ತವರ ಶವ ಸಂರಕ್ಷಿಸಿಟ್ಟುಕೊಂಡಿದೆ. ಈಗಾಗಲೇ 233 ಮೃತದೇಹಗಳನ್ನು ತೆಗೆದಿಟ್ಟುಕೊಂಡಿರುವ ಕಂಪನಿ ಮುಂದೊಂದು ದಿನ ಇವರನ್ನು ಬದುಕಿಸಬಹುದು ಎಂದು ಅದು ಹೇಳಿದೆ. ಈ ಕುರಿತ ಸಂಶೋಧನೆಯಲ್ಲಿ ಕಂಪನಿ ನಿರತವಾಗಿದೆ.
ಜೀವಂತ ಕೋಶಗಳನ್ನು, ಅಂಗಾಂಶಗಳನ್ನು ಮತ್ತು ಜೈವಿಕ ವಸ್ತುಗಳನ್ನು ಕಡಿಮೆ ತಾಪಮಾನದ ಮೂಲಕ ಸಂರಕ್ಷಿಸುವ ಮತ್ತು ಘನೀಕರಿಸುವ ಪ್ರಕ್ರಿಯೆಯಾಗಿದೆ. ವಯಸ್ಸಾಗಿ ಸತ್ತ ಮತ್ತು ರೋಗವಿಲ್ಲದೆ ಸತ್ತ ವ್ಯಕ್ತಿಗಳನ್ನು ಭವಿಷ್ಯದ ತಂತ್ರಜ್ಞಾನದ ಮೂಲಕ ಮತ್ತೆ ಬದುಕಿಸಬಹುದು ಎಂದು ಆಳವಾದ ವಿಶ್ವಾಸ ಹೊಂದಿದೆ. ಹೀಗಾಗಿ ಶ್ರೀಮಂತರು ಇಲ್ಲಿ ಸತ್ತ ವ್ಯಕ್ತಿಗಳ ದೇಹವನ್ನು ಸಂರಕ್ಷಿಸಲು ಮುಂದಾಗುತ್ತಿದ್ದಾರೆ.
ಸಂಪೂರ್ಣ ದೇಹದ ಸಂರಕ್ಷಣೆಗೆ 2 ಕೋಟಿ ರೂ. ಪಾವತಿಸಬೇಕಾಗುತ್ತದೆ. ಮೆದುಳಿನ ಮೇಲೆ ಕೇಂದ್ರೀಕರಿಸುವ ನ್ಯೂರೊ ಕ್ರಯೋಪ್ರೆಸರ್ವೇಶನ್ಗೆ 66 ಲಕ್ಷ ರೂ. ವೆಚ್ಚವಾಗುತ್ತದೆ. ನಿರಂತರ ಸಂಶೋಧನೆ ಮತ್ತು ನ್ಯಾನೊ ತಂತ್ರಜ್ಞಾನದ ಮೂಲಕ ಸತ್ತವರಿಗೆ ಪುನರ್ ಜನ್ಮ ನೀಡಲು ಸಂಶೋಧನೆ ನಡೆಸಲಾಗುತ್ತಿದೆ. ಇದೊಂದು ವೇಳೆ ಸಕ್ಸಸ್ ಆದರೆ ವಿಶ್ವದ ಮುಂದಿನ ದಿಕ್ಕೇ ಬದಲಾಗಲಿದೆ.
ನಂಬಿದ್ರೆ ನಂಬಿ..! ಸತ್ತವರನ್ನು ಬದುಕಿಸಿ ಪುನರ್ ಜೀವ ನೀಡುತ್ತದಂತೆ ಈ ಕಂಪನಿ!
RELATED ARTICLES