ಹೈದರಾಬಾದ್: ರೀಲ್ಸ್‌ಗಳ ಮೂಲಕ ಖ್ಯಾತಿ ಗಳಿಸಿ ಫನ್ ಬಕೆಟ್ ಭಾರ್ಗವ್ 14 ವರ್ಷದ ಬಾಲಕಿಯನ್ನು ಗರ್ಭಿಣಿಯಾಗಿಸಿದ ಪ್ರಕರಣದ ಸಂಬಂಧ ವಿಚಾರಣೆ ನಡೆಸಿದ ವಿಶಾಖಪಟ್ಟಣಂನ ಪೋಕ್ಸೊ ಕೋರ್ಟ್ 20 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ಸಂತ್ರಸ್ತ ಬಾಲಕಿಗೆ 4 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ತೀರ್ಪು ನೀಡಿದೆ.
ತೆಲುಗು ಯೂಟ್ಯೂಬರ್ ಫನ್ ಬಕೆಟ್ ಭಾರ್ಗವ್, ಟಿಕ್‌ಟಾಕ್‌ನಲ್ಲಿ ಹಾಸ್ಯ ವೀಡಿಯೊಗಳನ್ನು ಮಾಡುವ ಮೂಲಕ ಪ್ರಸಿದ್ಧರಾದರು. ಅದರ ನಂತರ, ಯೂಟ್ಯೂಬ್‌ನಲ್ಲಿ ಫನ್ ಬಕೆಟ್ ಎಂಬ ಕಾಮಿಡಿ ವೀಡಿಯೊಗಳನ್ನು ಮಾಡುವ ಮೂಲಕ ಖ್ಯಾತಿಯನ್ನು ಗಳಿಸಿದ್ದನು.
ಭಾರ್ಗವ್, ವಿಡಿಯೋ ತೆಗೆಯುವ ನೆಪದಲ್ಲಿ ಬಾಲಕಿಗೆ ಬೆದರಿಕೆ ಹಾಕಿ ಲೈಂಗಿಕ ದೌರ್ಜನ್ಯ ಎಸಗಿದ್ದು, ಆ ಹುಡುಗಿ ಗರ್ಭಿಣಿಯಾಗಿದ್ದಳು. ಈ ಬಗ್ಗೆ ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಭಾರ್ಗವ್ ವಿರುದ್ಧ ದಿಶಾ ಕಾಯ್ದೆ ಹಾಗೂ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದ್ದು, ಇದೀಗ ಜೈಲು ಸೇರಿದ್ದಾನೆ.