Sunday, January 19, 2025
HomeUncategorizedತುಳು ಕ್ಯಾಲೆಂಡರ್ ಬಿಡುಗಡೆ

ತುಳು ಕ್ಯಾಲೆಂಡರ್ ಬಿಡುಗಡೆ

ಮಂಗಳೂರು : ತುಳು ತಿಂಗಳುಗಳ ಹೆಸರಿನೊಂದಿಗೆ ತುಳುನಾಡಿನ ಹಬ್ಬ ಹರಿದಿನಗಳ ಮಾಹಿತಿಯುಳ್ಳ ‘ತುಳು ಕಾಲ ಕೋಂದೆ’ ತುಳು ಕ್ಯಾಲೆಂಡರನ್ನು ಶನಿವಾರದಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅವರು ಬಿಡುಗಡೆ ಮಾಡಿದರು .
ಈ ಸಂದರ್ಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಆಳ್ವಾರೀಸ್, ಬ್ಯಾರಿ ಅಕಾಡೆಮಿ ಅಧ್ಯಕ್ಷ ಉಮರ್ ಯು.ಹೆಚ್, ಸೋಮೇಶ್ವರ ಪುರಸಭೆ ಸದಸ್ಯ ದೀಪಕ್ ಪಿಲಾರ್ ಉಪಸ್ಥಿತರಿದ್ದರು.
‘ತುಳು ಕಾಲ ಕೋಂದೆ’ ಹೆಸರಿನಲ್ಲಿ ಕಳೆದ 12 ವರ್ಷಗಳಿಂದ ತುಳು ಕ್ಯಾಲೆಂಡರ್ ಪ್ರಕಟಿಸುತ್ತಿರುವ ಪ್ರವೀಣ್ ರಾಜ್ ಎಸ್.ರಾವ್ ಹಾಗೂ ಅವರ ಬಳಗದವರಾದ ಉದಯಾನಂದ ಬರ್ಕೆ, ವಿವೇಕ್ ಆಚಾರ್ಯ ಈ ಸಂದರ್ಭದಲ್ಲಿ ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular