ಕಾಸರಗೋಡು: ಕೂಡ್ಲು ಗ್ರಾಮದ ಮನ್ನಿಪಾಡಿಯ ಅತಿ ಪ್ರಸಿದ್ಧವಾದ ಆಲಂಗೋಡು ಶ್ರೀ ಧೂಮಾವತಿ ದೈವಸ್ಥಾನದ ನವೀಕರಣ ಪುನ: ಪ್ರತಿಷ್ಠಾ ಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಆಲಂಗೋಡು ಶ್ರೀ ಧೂಮಾವತಿ ದೈವಸ್ಥಾನದಲ್ಲಿಬಹು ವಿಜೃಂಭಣೆಯಿಂದ ಜರಗಿತು.
ಸಭೆಯ ಅಧ್ಯಕ್ಷತೆಯನ್ನು ಕ್ಷೇತ್ರದ ಮೊಕ್ತೆಸರರಾದ ಕೆ.ಜಿ ಶ್ಯಾನ್ ಭೋಗ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕೆ.ಪಿ ಜಯರಾಜ್, ( ಟ್ರಸ್ಟಿ ಕಾನತೂರು ದೇವಸ್ಥಾನ ) ಶಶಿಧರ ಎಂ.ಗಟ್ಟಿ ಸಹಾಯಕ ವಿದ್ಯಾಧಿಕಾರಿ ಕುಂಬಳೆ ಉಪ ಜಿಲ್ಲಾ, ಎನ್ ಸತೀಶ್, ಸುರೇಶ್ ಮಣಿಯಾಣಿ, ನಾರಾಯಣ ಬೋವಿ ಕಾನ ( ನವೀಕರಣ ಸಮಿತಿ ಧ್ಯಕ್ಷ ) ಉದಯಕುಮಾರ್ ಮನ್ನಿಪಾಡಿ ( ಸೇವಾ ಸಮಿತಿ ಅಧ್ಯಕ್ಷ, ನವೀಕರಣ ಸಮಿತಿಯ ಪ್ರಧಾನ ಕಾರ್ಯದರ್ಶಿ, ಲತಾ ನಂದಗೋಪಾಲ ( ಮಹಿಳಾ ಸಮಿತಿ ಅಧ್ಯಕ್ಷೆ) ಶ್ರೀ ನಾಗೇಶ್ ಗಟ್ಟಿ ( ನವೀಕರಣ ಸಮಿತಿ ಕೋಶಾಧಿಕಾರಿ ) ಕೃಷ್ಣ ಕಲೈಪಾಡಿ, ಶಂಕರ ಕಲೈ ಪಾಡಿ, ಕೃಪಾ ಕೆ.ಜಿ., ಕುನ್ಹಿರಾಮಮಣಿಯಾಣಿ ಹಾಗೂ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಗಣೇಶ್ ಗಟ್ಟಿ ಸ್ವಾಗತಿಸಿ, ರವಿ ವಂದಿಸಿದರು.