Thursday, April 24, 2025
Homeಕಿನ್ನಿಗೋಳಿಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಜೀರ್ಣೋದ್ಧಾರ - ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ

ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಜೀರ್ಣೋದ್ಧಾರ – ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ

ಕಿನ್ನಿಗೋಳಿ : ನಾಡಿನ ಪುಣ್ಯಕ್ಷೇತ್ರಗಳಲ್ಲೊಂದಾದ ಪುನರೂರು ಶ್ರೀ ವಿಶ್ವನಾಥ ದೇವಳದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಆಚರಣೆಯ ಸಿದ್ಧತೆಯಲ್ಲಿರುವ ಸಂದರ್ಭ ಊರ ಪರವೂರ ಭಕ್ತಾಭಿಮಾನಿಗಳು ಸರ್ವರೀತಿಯ ಸಹಕಾರ ನೀಡಿದ್ದಲ್ಲಿ ಈ ಕ್ಷೇತ್ರ ಬೆಳಗಬಹುದು. ಕ್ಷೇತ್ರದ ಅಭಿವೃದ್ಧಿಯಲ್ಲಿ ಭಾಗವಹಿಸುವುದೇ ನಮಗೆ ಸಿಕ್ಕಿದ ಯೋಗ, ನಾವೆಲ್ಲರೂ ಸಂಪೂರ್ಣವಾಗಿ ಈ ಪುಣ್ಯ ಕೆಲಸದಲ್ಲಿ ಭಾಗಿಯಾಗೋಣ ಎಂದು ವಿಶ್ವ ಬಂಟರ ಸಂಘದ ಅಧ್ಯಕ್ಷರಾದ ಐಕಳ ಹರೀಶ ಶೆಟ್ಟಿಯವರು ಹೇಳಿದರು.

ಅವರು ಪುನರೂರು ವಿಶ್ವನಾಥ ಕ್ಷೇತ್ರದಲ್ಲಿ ಪೂರ್ವಭಾವಿ ಸಭೆಯಲ್ಲಿ ಈ ವಿಚಾರ ತಿಳಿಸಿದರು. ಕಟೀಲು ಕ್ಷೇತ್ರದ ಲಕ್ಷ್ಮೀನಾರಾಯಣ ಆಸ್ರಣ್ಣರು ಸೂಕ್ತ ಸಲಹೆ ಸೂಚನೆಗಳನ್ನಿತ್ತರು. ಈ ಸಂದರ್ಭದಲ್ಲಿ ಧರ್ಮದರ್ಶಿ ಡಾ| ಹರಿಕೃಷ್ಣ ಪುನರೂರು, ಪಟೇಲ್ ವಾಸುದೇವ ರಾವ್, ಕೊಡೆತ್ತೂರು ಭುವನಾಭಿರಾಮ ಉಡುಪ, ಪುರಂದರ ಶೆಟ್ಟಿಗಾರ್, ರವಿ ಶೆಟ್ಟಿ, ಸುಧಾಕರ ರಾವ್, ಶಶಾಂಕ್ ಮುಚ್ಚಿಂತ್ತಾಯ, ಪೃಥ್ವಿರಾಜ್ ಆಚಾರ್ಯ, ಕಸ್ತೂರಿ ಪಂಜ, ದೇವಪ್ರಸಾದ ಪುನರೂರು, ವಿಶ್ವನಾಥ ರಾವ್, ಗೋಪಿನಾಥ ರಾವ್ ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular