Wednesday, July 24, 2024
Homeರಾಜ್ಯರೇಣುಕಾಸ್ವಾಮಿ ಕೊಲೆ ಪ್ರಕಣ: ಪೊಲೀಸ್ ಠಾಣೆ ಸುತ್ತ ಶಾಮಿಯಾನ ಅಳವಡಿಕೆ; ಸೆಕ್ಷನ್‌ 144 ಜಾರಿ |...

ರೇಣುಕಾಸ್ವಾಮಿ ಕೊಲೆ ಪ್ರಕಣ: ಪೊಲೀಸ್ ಠಾಣೆ ಸುತ್ತ ಶಾಮಿಯಾನ ಅಳವಡಿಕೆ; ಸೆಕ್ಷನ್‌ 144 ಜಾರಿ | ರಾಜ್ಯದ ಇತಿಹಾಸದಲ್ಲೇ ಇದು ಮೊದಲು!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ನಟ ದರ್ಶನ್‌ ಎರಡನೇ ದಿನ ಸೆಲ್‌ನಲ್ಲಿ ಕಳೆದಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿ ಎರಡು ದಿನಗಳಿಂದ ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ದರ್ಶನ್‌ ಕೊಲೆಯ ಬಗ್ಗೆ ಬಾಯಿ ಬಿಟ್ಟಿಲ್ಲವೆನ್ನಲಾಗಿದೆ. ಈ ನಡುವೆ ಸ್ವತಃ ಕಮೀಶನರ್‌ ದಯಾನಂದ್‌ ಕೂಡ ದರ್ಶನ್‌ ವಿಚಾರಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ನಡುವೆ ಠಾಣೆಗೆ ಶಾಮಿಯಾನ ಹಾಕಿಸಲಾಗಿದೆ. ರಾಜ್ಯದ ಇತಿಹಾಸದಲ್ಲೇ ಇದೇ ಮೊದಲು ಠಾಣೆಯ ಸುತ್ತ ಶಾಮಿಯಾನ ಹಾಕಲಾಗಿದೆ ಮತ್ತು ಸೆಕ್ಷನ್‌ 144 ಜಾರಿ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಕೊಲೆ ಪ್ರಕರಣದ ಆರೋಪಿಗಳನ್ನು ಮರೆ ಮಾಚಲು ಠಾಣೆಯ ಸುತ್ತ ಶಾಮಿಯಾನ ಅಳವಡಿಸಲಾಗಿದೆ. ಠಾಣೆಯ ಕಂಪೌಂಡ್‌ ಸುತ್ತ ಪೊಲೀಸರು ಪರದೆ ಕಟ್ಟಿದ್ದಾರೆ. ಹೊರಗೆ ಯಾವುದೇ ದೃಶ್ಯವೂ ಕಾಣದಂತೆ ಶಾಮಿಯಾನ ಕಟ್ಟಲಾಗಿದೆ.
ಇನ್ನೊಂದೆಡೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆ ಬಳಿ ಸೆಕ್ಷನ್‌ 144 ಜಾರಿ ಮಾಡಿ ಕಮೀಶನರ್‌ ದಯಾನಂದ್‌ ಆದೇಶ ಹೊರಡಿಸಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜೂ. 13ರಿಂದ 17ರವರೆಗೂ ನಿಷೇಧಾಜ್ಞೆ ಜಾರಿಯಾಗಿದೆ.

RELATED ARTICLES
- Advertisment -
Google search engine

Most Popular