Monday, July 15, 2024
Homeಅಪರಾಧರೇಣುಕಾಸ್ವಾಮಿ ಹತ್ಯೆ ಪ್ರಕರಣ | ಕಣ್ಣೆದುರೇ ಮಗನ ಬಂಧನ; ಮನನೊಂದ ತಂದೆ ಹೃದಯಾಘಾತಕ್ಕೆ ಬಲಿ!

ರೇಣುಕಾಸ್ವಾಮಿ ಹತ್ಯೆ ಪ್ರಕರಣ | ಕಣ್ಣೆದುರೇ ಮಗನ ಬಂಧನ; ಮನನೊಂದ ತಂದೆ ಹೃದಯಾಘಾತಕ್ಕೆ ಬಲಿ!

ಚಿತ್ರದುರ್ಗ: ನಟ ದರ್ಶನ್‌ ಆರೋಪಿಯಾಗಿರುವ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎ7 ಆರೋಪಿಯ ಬಂಧನದ ಬೆನ್ನಲ್ಲೇ ಆತನ ತಂದೆ ಹೃದಯಾಘಾತದಿಂದ ಸಾವಿಗೀಡಾದ ಘಟನೆ ನಡೆದಿದೆ. ಚಿತ್ರದುರ್ಗ ಡಿವೈಎಸ್ಪಿ ದಿನಕರ್‌, ಕಾಮಾಕ್ಷಿಪಾಳ್ಯ ಇನ್ಸ್‌ಪೆಕ್ಟರ್‌ ಸಂಜಯ್‌ ಗೌಡ ನೇತೃತ್ವದಲ್ಲಿ ಎ6 ಜಗ್ಗ ಅಲಿಯಾಸ್‌ ಜಗದೀಶ್‌, ಎ7 ಆರೋಪಿ ಅನಿ ಅಲಿಯಾಸ್‌ ಅನುಕುಮಾರ್‌ ಇಬ್ಬರನ್ನೂ ಬಂಧಿಸಿದ್ದರು. ಬಂಧನದ ಬಳಿಕ ಅವರಿಬ್ಬರನ್ನೂ ಬೆಂಗಳೂರಿಗೆ ಕರೆದೊಯ್ದಿದ್ದರು.
ಅನುಕುಮಾರ್‌ ಬಂಧನದ ಬೆನ್ನಲ್ಲೇ ಅವರ ತಂದೆ ಚಂದ್ರಣ್ಣ (60) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಚಿತ್ರದುರ್ಗದ ಸಿಹಿನೀರು ಹೊಂಡದ ಬಳಿಯ ತಮ್ಮ ನಿವಾಸದಲ್ಲಿ ಅವರು ಕೊನೆಯುಸಿರೆಳೆದರು.

RELATED ARTICLES
- Advertisment -
Google search engine

Most Popular