Sunday, July 14, 2024
Homeರಾಜ್ಯರೇಣುಕಾಸ್ವಾಮಿ ಶವ ವಿಲೇವಾರಿ ಡೀಲ್‌ಗೆ ನೀಡಲಾಗಿದ್ದ 30 ಲಕ್ಷ ರೂ. ನಟ ದರ್ಶನ್‌ ಆಪ್ತನ ಮನೆಯಲ್ಲಿ...

ರೇಣುಕಾಸ್ವಾಮಿ ಶವ ವಿಲೇವಾರಿ ಡೀಲ್‌ಗೆ ನೀಡಲಾಗಿದ್ದ 30 ಲಕ್ಷ ರೂ. ನಟ ದರ್ಶನ್‌ ಆಪ್ತನ ಮನೆಯಲ್ಲಿ ಪತ್ತೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಹೆಸರು ಹೇಳದಿರಲು ಡೀಲ್‌ ಮಾಡಲಾಗಿದ್ದ 30 ಲಕ್ಷ ರೂ. ಹಣವನ್ನು ಪೊಲೀಸರು ಮುಟ್ಟುಗೋಲು ಹಾಕಿದ್ದಾರೆ. ದರ್ಶನ್‌ ಆಪ್ತನೊಬ್ಬನ ಮನೆ ಪೊಲೀಸರು ದಾಳಿ ನಡೆಸಿದ ವೇಳೆ ಹಣ ಪತ್ತೆಯಾಗಿದೆ.
ನಟ ಕೊಟ್ಟಿದ್ದ ಹಣವನ್ನು ಆಪ್ತನೊಬ್ಬನ ಮನೆಯಲ್ಲಿ ಇಡಲಾಗಿತ್ತು. ವಿಚಾರಣೆ ವೇಳೆ ಆರೋಪಿಗಳು ಹಣದ ಬಗ್ಗೆ ಬಾಯಿಬಿಟ್ಟಿದ್ದಾರೆ. ನಂತರ ಪೊಲೀಸರು ಹಣವನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆಯನ್ನು ಒಪ್ಪಿಕೊಳ್ಳಲು, ಶವ ಸಾಗಿಸಲು ಮತ್ತು ನಟ ದರ್ಶನ್‌ ಹೆಸರು ಬಾಯಿಬಿಡದಿರಲು ಬಂಧಿತರ ಪೈಕಿ ಐವರಿಗೆ 30 ಲಕ್ಷ ರೂ. ಸುಪಾರಿ ನೀಡಲಾಗಿತ್ತು ಎನ್ನಲಾಗಿದೆ.
ಶವ ಯಾರಿಗೂ ಸಿಗದಂತೆ ಸಾಗಿಸಲು ಮೂವರು ಆರೋಪಿಗಳಿಗೆ ಮುಂಗಡವಾಗಿ 5 ಲಕ್ಷ ರೂ. ಸಂದಾಯ ಮಾಡಲಾಗಿತ್ತು. ಉಳಿದ ಇಬ್ಬರು ಜೈಲಿಗೆ ಹೋದ ಮೇಲೆ ಅವರ ಮನೆಯವರಿಗೆ ಹಣ ತಲುಪಿಸುವುದಾಗಿ ಹೇಳಲಾಗಿತ್ತು. ಈ ವಿಷಯ ತನಿಖೆಯ ವೇಳೆ ಆರೋಪಿಗಳು ಪೊಲೀಸರ ಮುಂದೆ ಬಾಯಿಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿ ಹಣ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

RELATED ARTICLES
- Advertisment -
Google search engine

Most Popular