Tuesday, June 18, 2024
Homeಅಪರಾಧರೇಣುಕಾಸ್ವಾಮಿ ಹತ್ಯೆ ಪ್ರಕರಣ: ಮೂಗು, ಬಾಯಿ, ದವಡೆ ಕತ್ತರಿಸಿ ವಿಕೃತಿ ಮೆರೆದಿದ್ದ ದರ್ಶನ್‌ ಟೀಂ

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಮೂಗು, ಬಾಯಿ, ದವಡೆ ಕತ್ತರಿಸಿ ವಿಕೃತಿ ಮೆರೆದಿದ್ದ ದರ್ಶನ್‌ ಟೀಂ

ಬೆಂಗಳೂರು: ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದಲೇ ಅಪಹರಣ ಮಾಡಿ, ಬೆಂಗಳೂರಿಗೆ ತಂದ ದರ್ಶನ್‌ ಟೀಂ ಆತನನ್ನು ವಿಕೃತವಾಗಿ ಕೊಲೆ ಮಾಡಿದ ವಿಚಾರ ಬೆಳಕಿಗೆ ಬಂದಿದೆ.
ಮೆಡಿಕಲ್‌ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾಸ್ವಾಮಿಯನ್ನು ಕಿಡ್ನಾಪ್‌ ಮಾಡಿ ಬೆಂಗಳೂರಿಗೆ ಕರೆ ತಂದು 24 ಗಂಟೆ ನಿರಂತರ ಚಿತ್ರಹಿಂಸೆ ನೀಡಿದ್ದಾರೆ. ಉದ್ಯಮಿ ವಿನಯ್‌ಗೆ ಸೇರಿದ ಗೋಡಾನ್‌ನಲ್ಲಿ ರೇಣುಕಾಸ್ವಾಮಿಗೆ ಭೀಕರ ಹಲ್ಲೆ ನಡೆಸಲಾಗಿದೆ.
ದರ್ಶನ್‌ ಟೀಂ ರೇಣುಕಾಸ್ವಾಮಿಯ ಮೂಗು, ಬಾಯಿ, ದವಡೆ ಕತ್ತರಿಸಿ ವಿಕೃತಿ ಮೆರೆದಿದೆ. ಬಳಿಕ ಆತನ ಶವವನ್ನು ಸುಮ್ಮನಹಳ್ಳಿಯ ಸತ್ಯ ಅನುಗ್ರಹ ಅಪಾರ್ಟ್‌ಮೆಂಟ್‌ ಮುಂಭಾಗದಲ್ಲಿರುವ ರಾಜಕಾಲುವೆಗೆ ಎಸೆದಿದ್ದರು.
ರೇಣುಕಾಸ್ವಾಮಿ ಹತ್ಯೆ ಮಾಡಿದ ಬಳಿಕ ಶವವನ್ನು ಆಟೊ ರಿಕ್ಷಾ ಮತ್ತು ಸ್ಕಾರ್ಪಿಯೋ ಕಾರಲ್ಲಿ ರವಾನೆ ಮಾಡಿದ್ದಾರೆ ಎನ್ನಲಾಗಿದೆ. ಬಡ್ಡಿ ಕಟ್ಟಲು ಸಾಧ್ಯವಾಗದ ವಿನಯ್‌ ಆಟೊವನ್ನು ವಶಕ್ಕೆ ಪಡೆದಿದ್ದ ಆಟೊದಲ್ಲಿ ಶವವನ್ನು ರವಾನೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.

RELATED ARTICLES
- Advertisment -
Google search engine

Most Popular