Wednesday, July 24, 2024
Homeಅಪರಾಧಚರಂಡಿಗೆ ಎಸೆಯುವುದು ಬೇಡ; ರೇಣುಕಾಸ್ವಾಮಿ ಮನೆಯವರಿಗಾದರೂ ಶವ ಸಿಕ್ಕಲಿ ಎಂದಿದ್ದ ಆರೋಪಿ ಕಾರ್ತಿಕ್!

ಚರಂಡಿಗೆ ಎಸೆಯುವುದು ಬೇಡ; ರೇಣುಕಾಸ್ವಾಮಿ ಮನೆಯವರಿಗಾದರೂ ಶವ ಸಿಕ್ಕಲಿ ಎಂದಿದ್ದ ಆರೋಪಿ ಕಾರ್ತಿಕ್!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಒಟ್ಟು 15 ಆರೋಪಿಗಳು ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ವಿಚಾರಣೆಯಲ್ಲಿ ಒಬ್ಬೊಬ್ಬರು ಒಂದೊಂದು ಶಾಕಿಂಗ್‌ ವಿಚಾರ ಬಾಯಿಬಿಡುತ್ತಿದ್ದು, ಅವರಲ್ಲಿ ಎ15 ಆರೋಪಿ ಕಾರ್ತಿಕ್‌ ಕೊಂಚ ಮಾನವೀಯತೆ ತೋರಿದ್ದನೆಂಬುದು ಗೊತ್ತಾಗಿದೆ.
ಭೀಕರ ಕ್ರೌರ್ಯದ ಬಳಿಕ ರೇಣುಕಾಸ್ವಾಮಿ ಮೃತಪಟ್ಟಿದ್ದ. ನಂತರ ಶವ ಸಾಗಿಸಲು ಆರೋಪಿಗಳು ಯೋಜನೆ ರೂಪಿಸಿದ್ದರು. ಅವರಲ್ಲಿ ನಿಖಿಲ್‌, ಕಾರ್ತಿಕ್‌, ಕೇಶವಮೂರ್ತಿ ಸುಮನಹಳ್ಳಿ ಮೋರಿಗೆ ರೇಣುಕಾಸ್ವಾಮಿ ಶವ ಎಸೆಯಲು ಹೋಗಿದ್ದರು. ಮೋರಿಯೊಳಗೆ ಶವ ಬಿಸಾಡೋಣ, ಶವ ಕೊಚ್ಚಿಕೊಂಡು ಹೋಗುತ್ತದೆ. ನಂತರ ಅದು ಸಿಗುವಾಗ ಎಷ್ಟು ದಿನವಾಗುತ್ತೋ ಗೊತ್ತಿಲ್ಲ ಎಂದು ನಿಖಿಲ್‌ ಹಾಗೂ ಕೇಶವಮೂರ್ತಿ ಹೇಳಿದ್ದಾರೆ. ಆದರೆ ಕಾರ್ತಿಕ್‌ ಇದಕ್ಕೆ ವಿರೋಧ ಮಾಡಿದ್ದನು ಎನ್ನಲಾಗಿದೆ. ಹೆಂಗಿದ್ದರೂ ಪೊಲೀಸರ ಮುಂದೆ ಸರಂಡರ್‌ ಆಗ್ತೀವಲ್ಲ, ಸ್ವಾಮಿ ಮನೆಯವರಿಗಾದರೂ ಶವ ಸಿಕ್ಕಲಿ, ಚರಂಡಿಗೆ ಬೇಡ, ಮೇಲೆ ಇಟ್ಟುಹೋಗೋಣ ಎಂದು ಕಾರ್ತಿಕ್‌ ಹೇಳಿದ್ದಾನೆ. ಕೊನೆಗೆ ಶವವನ್ನು ಕಸದ ರಾಶಿ ನಡುವೆ ಎಸೆದು ಹೋಗಿದ್ದರು.
ಇತ್ತ ಹೆಣ ಸಿಗುತ್ತಿದ್ದಂತೆಯೇ ಪೊಲೀಸರು ತನಿಖೆಗಿಳಿದಿದ್ದು, ಪ್ರಕರಣದ ಸಂಪೂರ್ಣ ವಿಚಾರ ಬಯಲಾಗಿದೆ. ನಂತರ ನಟ ದರ್ಶನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಒಟ್ಟು 15 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

RELATED ARTICLES
- Advertisment -
Google search engine

Most Popular