Saturday, December 14, 2024
Homeಬೆಂಗಳೂರುರೇಣುಕಾಸ್ವಾಮಿ ಕೊಲೆ ಕೇಸು | ಒಟ್ಟು ಮೂವರಿಗೆ ಜಾಮೀನು; ಯಾವ ಆಧಾರದಲ್ಲಿ ಬೇಲ್‌ ಸಿಕ್ಕಿತು ಗೊತ್ತಾ?

ರೇಣುಕಾಸ್ವಾಮಿ ಕೊಲೆ ಕೇಸು | ಒಟ್ಟು ಮೂವರಿಗೆ ಜಾಮೀನು; ಯಾವ ಆಧಾರದಲ್ಲಿ ಬೇಲ್‌ ಸಿಕ್ಕಿತು ಗೊತ್ತಾ?

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಇನ್ನಿಬ್ಬರು ಆರೋಪಿಗಳಿಗೆ ಜಾಮೀನು ಮಂಜೂರಾಗಿದ್ದು, ಇಂದು ಒಟ್ಟು ಮೂವರಿಗೆ ಜಾಮೀನು ಮಂಜೂರಾದಂತಾಗಿದೆ. ಕೇಶವಮೂರ್ತಿಗೆ ಹೈಕೋರ್ಟ್‌ನಿಂದ ಕಾರ್ತಿಕ್‌, ನಿಖಿಲ್‌ ನಾಯಕ್‌ಗೆ 57ನೇ ಸಿಸಿಹೆಚ್ ಕೋರ್ಟ್ ನಿಂದ ಜಾಮೀನು ಸಿಕ್ಕಿದೆ.
ಈ ಪ್ರಕರಣದಲ್ಲಿ ಕಾರ್ತಿಕ್‌, ಕೇಶವ್‌ಮೂರ್ತಿ, ನಿಖಿಲ್‌ ನಾಯಕ್‌ ಕ್ರಮವಾಗಿ ಎ 15, ಎ16, ಎ17 ಆರೋಪಿಗಳಾಗಿದ್ದರು. ಈ ಮೂವರು ರೇಣುಕಾಸ್ವಾಮಿ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಆದರೆ ತನಿಖೆ ವೇಳೆ ಆರೋಪಿಗಳು ನೇರವಾಗಿ ಕೊಲೆಯಲ್ಲಿ ಭಾಗಿಯಾಗಿಲ್ಲ. ಸಾಕ್ಷಿನಾಶ ಮಾಡಲು ಮುಂದಾಗಿದ್ದ ವಿಚಾರ ಬೆಳಕಿಗೆ ಬಂದಿತ್ತು. ಹೀಗಾಗಿ ಪೊಲೀಸರು ಸಾಕ್ಷ್ಯನಾಶ ಆಡಿಯಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ್ದರು. ಕೊಲೆಯಲ್ಲಿ ನೇರವಾಗಿ ಭಾಗಿಯಾಗದ ಕಾರಣ ಮೂವರಿಗೆ ಇಂದು ಜಾಮೀನು ಸಿಕ್ಕಿದೆ.

RELATED ARTICLES
- Advertisment -
Google search engine

Most Popular