ತಿಂಗಳಿಗೆ 10,000 ಕೊಡ್ತೀನಿ, ಲಿವ್‌ಇನ್ ರಿಲೇಶನ್‌ಶಿಪ್‌ನಲ್ಲಿ ಇರ್ತಿಯಾ? | ದರ್ಶನ್ ಸಿಟ್ಟು ನೆತ್ತಿಗೇರಿಸಿದ್ದ ರೇಣುಕಾಸ್ವಾಮಿ ಚಾಟ್ ಹಿಸ್ಟರಿ; ಚಾರ್ಜ್‌ಶೀಟ್ ಮಾಹಿತಿ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಪೊಲೀಸರು ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ನಟ ದರ್ಶನ್ ಗ್ಯಾಂಗ್ ಕ್ರೌರ್ಯವಷ್ಟೇ ಅನಾವರಣಗೊಂಡಿಲ್ಲ. ರೇಣುಕಾಸ್ವಾಮಿಯ ವಿಕೃತ ಮನಸ್ಥಿತಿ ಹೇಗಿತ್ತು? ಎನ್ನುವುದನ್ನೂ ಪೊಲೀಸರು ಸಾಕ್ಷ್ಯ ಸಮೇತ ಬಯಲು ಮಾಡಿದ್ದಾರೆ. ಗೌತಮ್ ಹೆಸರಲ್ಲಿ ನಕಲಿ ಇನ್‌ಸ್ಟಾಗ್ರಾಂ ಖಾತೆ ತೆರೆದಿದ್ದ ರೇಣುಕಾಸ್ವಾಮಿ, ಪ್ರತಿನಿತ್ಯ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಎನ್ನುವುದು ದೋಷಾರೋಪ ಪಟ್ಟಿಯಲ್ಲಿ ಬಯಲಾಗಿದೆ.
ರೇಣುಕಾಸ್ವಾಮಿ ಅಶ್ಲೀಲ ಸಂದೇಶದಿಂದ ರೋಸಿಹೋಗಿದ್ದ ನಟಿ ಪವಿತ್ರಾಗೌಡ, ಗೆಳೆಯ ಪವನ್ ಮೂಲಕ ರೇಣುಕಾಸ್ವಾಮಿಯನ್ನು ಲಾಕ್ ಮಾಡಲು ಸ್ಕೆಚ್ ಹಾಕಿದ್ದರು. ಇದರ ಭಾಗವಾಗಿಯೇ ಪವಿತ್ರಾ ಗೌಡ ಹೆಸರಲ್ಲಿ ಪವನ್ ಚಾಟಿಂಗ್ ಮಾಡಲು ಶುರು ಹಚ್ಕೊಂಡಿದ್ದ. ನೈಸಾಗಿ ಮಾತಾಡುತ್ತಲೇ ರೇಣುಕಾಸ್ವಾಮಿ ಎಲ್ಲಿ ಕೆಲಸ ಮಾಡ್ತಾನೆ? ಯಾವ ಊರಲ್ಲಿ ಕೆಲಸ ಮಾಡ್ತಾನೆ? ಅನ್ನೋದನ್ನು ಪವನ್ ಮೂಲಕ ಡಿ ಗ್ಯಾಂಗ್ ಪತ್ತೆ ಹಚ್ಚಿತ್ತು. ರೇಣುಕಾಸ್ವಾಮಿ ಲಾಕ್ ಆಗಿದ್ದು ಕೂಡ ಇಲ್ಲಿಯೇ.
ಕಳೆದ ಜೂನ್ 5, 6 ಮತ್ತು 7ರಂದು ಬೆಳಗ್ಗೆ ವರೆಗೂ ಗೌತಮ್ ಆಲಿಯಾಸ್ ರೇಣುಕಾಸ್ವಾಮಿ ಮತ್ತು ಪವಿತ್ರಾ ಗೌಡ ಹೆಸರಲ್ಲಿ ಪವನ್ ಚಾಟ್ ನಡೆಸಿದ್ದ. ರೇಣುಕಾಸ್ವಾಮಿ ಲೊಕೇಶನ್ ಗೊತ್ತಾಗುತ್ತಲೇ, ಕಿಡ್ನ್ಯಾಪ್‌ಗೆ ಪ್ಲ್ಯಾನ್ ನಡೆದಿತ್ತು. ಶೆಡ್‌ನಲ್ಲಿ ಹಲ್ಲೆ ವೇಳೆ, ಈ ಬಗ್ಗೆ ಪ್ರಸ್ತಾಪಿಸಿ ದರ್ಶನ್ ಕೂಗಾಡಿದ್ದರು. ರೇಣುಕಾಸ್ವಾಮಿ ಮಾಡಿದ್ದ ಅಶ್ಲೀಲ ಮೆಸೇಜ್‌ಗಳನ್ನೇ ಓದುತ್ತಾ ರೇಣುಕಾ ಎದೆಗೆ ಒದ್ದು, ಮರ್ಮಾಂಗದ ಮೇಲೆ ಕಾಲಿಟ್ಟು ಕ್ರೌರ್ಯ ಮೆರೆದಿದ್ದರು. ತಿಂಗಳಿಗೆ 10 ಸಾವಿರ ಕೊಡ್ತೀಯೇನೋ? ಪವಿತ್ರಾ ದಿನದ ಖರ್ಚೇ 20 ಸಾವಿರ ಕಣೋ ಎನ್ನುತ್ತಾ ರೇಣುಕಾ ಎದೆಗೆ ದರ್ಶನ್ ಒದ್ದಿದ್ದರು ಎಂಬ ಎಲ್ಲ ಮಾಹಿತಿಗಳು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ರೇಣುಕಾ – ಪವಿತ್ರಾ ನಡುವಿನ ಇನ್‌ಸ್ಟಾಗ್ರಾಮ್ ಚಾಟ್ ಸಂಭಾಷಣೆ:
ಜೂನ್ 5:
- ರೇಣುಕಾಸ್ವಾಮಿ : ಹಾಯ್ ಕಣೆ.. ನಿನ್ನ ನಂಬರ್ ಸೆಂಡ್ ಮಾಡು..
- ಪವಿತ್ರಾಗೌಡ : ವಾಟ್ ಯೂ ಎಕ್ಸ್ಪೆಕ್ಟ್ ಮಿ..
- ರೇಣುಕಾಸ್ವಾಮಿ : ಸಖತ್ತಾಗಿ ಇದ್ದಿಯಾ ಕಣೆ
- ಪವಿತ್ರಾ ಗೌಡ : ಡ್ರಾಪ್ ಮಿ ಯುವರ್ ನಂಬರ್
- ರೇಣುಕಾಸ್ವಾಮಿ : ನಿನ್ನ ನಂಬರ್ ಸೆಂಡ್ ಮಾಡು.. ಪ್ಲೀಸ್ ಕಣೆ
- ಪವಿತ್ರಾ ಗೌಡ : 97.. ಪ್ಲೀಸ್ ಕಾಲ್ ಆನ್ ದಿಸ್
ಜೂನ್ 6:
- ಪವಿತ್ರಾ ಗೌಡ : ಹೇ ನಿನ್ನ ಮೆಡಿಕಲ್ ಶಾಪ್ ಫೋಟೋ ಸೆಂಡ್ ಮಾಡು
- ರೇಣುಕಾಸ್ವಾಮಿ : ಯಾಕೆ..?
- ಪವಿತ್ರಾ ಗೌಡ : ಸುಮ್ಮನೆ ನೀನು ಸುಳ್ಳು ಹೇಳ್ತಿಯಾ ಅಂತ ಡೌಟ್..?
- ರೇಣುಕಾಸ್ವಾಮಿ : ಮದರ್ ಪ್ರಾಮಿಸ್.. ನಾನು ಡ್ಯೂಟಿಲಿ ಇದ್ದೀನಿ ಕಣೆ.. ಆಯ್ತಾ..?
- ಪವಿತ್ರಾ ಗೌಡ : ನಿಜ ಅನ್ನಿಸ್ತಿಲ್ಲ ಕಣೋ..
- ರೇಣುಕಾಸ್ವಾಮಿ : (ಫಾರ್ಮಸಿ ಔಟ್‌ಸೈಡ್ ಫೋಟೋ ಕಳಿಸಿದ್ದ)
ಜೂನ್ 7:
- ರೇಣುಕಾಸ್ವಾಮಿ : ಇದು ಬೇಕಾ ನಿನಗೆ?
- ಪವಿತ್ರಾ ಗೌಡ : ಬೇಕು
- ರೇಣುಕಾಸ್ವಾಮಿ : (ಅಶ್ಲೀಲ ಫೋಟೋ ಕಳಿಸಿದ)
- ಪವಿತ್ರಾ ಗೌಡ : ಓಕೆ ಬಾಯ್
- ರೇಣುಕಾಸ್ವಾಮಿ : ನನ್ ಜೊತೆ ಸೀಕ್ರೆಟ್ ಆಗಿ ಲಿವ್‌ಇನ್ ರಿಲೇಷನ್‌ಶಿಪ್ ಮಾಡ್ತಿಯಾ ಹೇಳು ಪ್ಲೀಸ್?
- ಪವಿತ್ರಾ ಗೌಡ : ಓಕೆ, ಬಟ್ ನೀನು ನಾನು ಕರೆದಾಗ ಬರ್ತಿಯಾ..?
- ರೇಣುಕಾಸ್ವಾಮಿ : ನಿನಗೋಸ್ಕರ ಬರ್ತಿನಿ ಕಣೆ ಆಯ್ತಾ
- ರೇಣುಕಾಸ್ವಾಮಿ : ನಾನು ಇರೋದು ದುರ್ಗ ಕಣೆ ಆಯ್ತಾ..
- ಪವಿತ್ರಾ ಗೌಡ : ಯಾವಾಗ ಬರ್ತಿಯಾ ಬೆಂಗಳೂರಿಗೆ.?
- ರೇಣುಕಾಸ್ವಾಮಿ : ಎವರಿ ಮಂತ್ ಎಂಡ್ ನಿನಗೆ 10 ಸಾವಿರ ಕೋಡ್ತಿನಿ ಕಣೆ ಆಯ್ತಾ..?
- ರೇಣುಕಾಸ್ವಾಮಿ : ನೀನು ನನ್ನ ಜೊತೆ ದಿನ ಮಾತಾಡ್ತಿದ್ರೆ ಮಾತ್ರ..
- ಪವಿತ್ರಾ ಗೌಡ : ಓಹೋ ಆಯ್ತು..
32 ವಾಟ್ಸಪ್ ಕಾಲ್ ವಿವರ, 65 ಫೋಟೋ ರಿಟ್ರೀವ್:
ಬರೀ ಇಷ್ಟೇ ಅಲ್ಲ, ರೇಣುಕಾಸ್ವಾಮಿ ಕೊಲೆಗೆ ಮುನ್ನ ಮತ್ತು ನಂತರ ಏನೆಲ್ಲಾ ನಡೀತು ಎಂಬುದಕ್ಕೂ ಪೊಲೀಸರಿಗೆ ಸಾಕಷ್ಟು ಸಾಕ್ಷ್ಯ ಸಿಕ್ಕಿವೆ. ರೇಣುಕಾ ಕೊಲೆ ವೇಳೆ ಕ್ಲಿಕ್ಕಿಸಿದ 65 ಫೋಟೋಗಳು ಪವಿತ್ರಾ ಗೌಡ ಮೊಬೈಲ್‌ನಲ್ಲಿ ಪತ್ತೆಯಾಗಿವೆ.
ದರ್ಶನ್ ಐಫೋನ್ ರೀಟ್ರೀವ್ ವೇಳೆ, ದರ್ಶನ್ ಯರ‍್ಯಾರ ಜೊತೆ ನಿಕಟ ಸಂಪರ್ಕದಲ್ಲಿದ್ದ ಅನ್ನೋದು ಗೊತ್ತಾಗಿದೆ. ವಿನಯ್ ಜೊತೆ ನಡೆಸಿದ್ದ ವಾಟ್ಸಪ್ ಚಾಟ್, ಮ್ಯಾನೇಜರ್ ನಾಗರಾಜ್ ಜೊತೆ 32 ಬಾರಿ ನಡೆಸಿದ್ದ ವಾಟ್ಸಪ್ ಕಾಲ್. ಪ್ರದೋಷ್ ಜೊತೆಗಿನ 10 ವಾಟ್ಸಪ್ ಕಾಲ್ ವಿವರಗಳು ಸಿಕ್ಕಿವೆ. ಭಾನುವಾರ ಮಧ್ಯಾಹ್ನ ಪವಿತ್ರಾಗೆ ಕರೆ ಮಾಡುವ ದರ್ಶನ್, ಪೊಲೀಸರು ವಿಚಾರಿಸಿದರೆ ನನಗೇನು ಗೊತ್ತಿಲ್ಲ ಎಂದು ಹೇಳು ಅಂದಿದ್ರು. ರೇಣುಕಾಸ್ವಾಮಿ ಸಾವಿನ ವಿಚಾರ ತಿಳಿದ ಪವಿತ್ರಾ ಗೌಡ, ನಂತರ ದರ್ಶನ್ ಸಂಪರ್ಕಿಸಲು ಹೆದರಿದ್ದರು. ದರ್ಶನ್ ಬಂಧಿಸಲು ಪೊಲೀಸರು ತೆರಳಿದ್ದ ಸಂದರ್ಭದಲ್ಲಿ ನಟನ ಬಾಡಿಗಾರ್ಡ್‌ಗಳು ದಾರಿ ತಪ್ಪಿಸಲು ಯತ್ನಿಸಿದ್ದರು. ಆದರೆ ಪೊಲೀಸರು ಬಿಡದೇ ದರ್ಶನ್ ಬಂಧಿಸಿದ್ದರು. ಈ ವೇಳೆ, ನನ್ನಿಂದ ತಪ್ಪಾಗಿದೆ ಸರ್ ಎಂದು ನಟ ದರ್ಶನ್ ತಲೆ ತಗ್ಗಿಸಿದ್ದರು. ಇನ್ನು ಅರೆಸ್ಟ್ ಆದ್ಮೇಲೆ ಪೊಲೀಸ್ ಕಸ್ಟಡಿಯಲ್ಲಿ ಪವಿತ್ರಾಗೌಡ ಕಣ್ಣೀರಿಟ್ಟಿದ್ದರು ಎಂಬ ಫೋಟೋ ಸಹ ಲಭ್ಯವಾಗಿದ್ದು, ಇವೆಲ್ಲವೂ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿದೆ.