Saturday, July 20, 2024
HomeUncategorizedಪವಿತ್ರಾಗೆ ಐದು ತಿಂಗಳಿಂದ ಅಶ್ಲೀಲ ಮೆಸೇಜ್‌ ಮಾಡುತ್ತಿದ್ದ ರೇಣುಕಾಸ್ವಾಮಿ: ಚಾಟ್‌ ರಹಸ್ಯ ಬಹಿರಂಗ

ಪವಿತ್ರಾಗೆ ಐದು ತಿಂಗಳಿಂದ ಅಶ್ಲೀಲ ಮೆಸೇಜ್‌ ಮಾಡುತ್ತಿದ್ದ ರೇಣುಕಾಸ್ವಾಮಿ: ಚಾಟ್‌ ರಹಸ್ಯ ಬಹಿರಂಗ

ಬೆಂಗಳೂರು: ನಟ ದರ್ಶನ್‌ ಮತ್ತು ಗ್ಯಾಂಗ್‌ನಿಂದ ಹತ್ಯೆಗೊಳಗಾಗಿದ್ದಾನೆನ್ನಲಾದ ಚಿತ್ರದುರ್ಗದ ರೇಣುಕಾಸ್ವಾಮಿ ಸುಮಾರು 5 ತಿಂಗಳಿನಿಂದ ಪವಿತ್ರಾ ಗೌಡಗೆ ಮೆಸೇಜ್‌ ಮಾಡುತ್ತಿದ್ದ ಎಂಬ ರಹಸ್ಯ ಬಯಲಾಗಿದೆ.
ಪವಿತ್ರಾಗೆ ಐದು ತಿಂಗಳಿನಿಂದ ರೇಣುಕಾಸ್ವಾಮಿ ಅಶ್ಲೀಲ ಸಂದೇಶಗಳನ್ನು ರವಾನಿಸುತ್ತಿದ್ದ. ಸುಮಾರು 200ಕ್ಕೂ ಹೆಚ್ಚು ಮೆಸೇಜ್‌ಗಳು ರೇಣುಕಾಸ್ವಾಮಿಯಿಂದ ಪವಿತ್ರಾಗೆ ಬಂದಿವೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ವರದಿಗಳು ತಿಳಿಸಿವೆ.
ರೇಣುಕಾಸ್ವಾಮಿ ಮೆಸೇಜ್‌ ಮಾಡಿದ್ದರೂ ಪವಿತ್ರಾ ರಿಪ್ಲೈ ಮಾಡಿರಲಿಲ್ಲ. ಆದರೆ ಬಳಿಕ ಪವನ್‌ ಬಳಿ ಪವಿತ್ರಾ ಈ ವಿಷಯ ತಿಳಿಸಿದ್ದಳೆನ್ನಲಾಗಿದೆ.


ಆ ನಂತರ ರೇಣುಕಾಸ್ವಾಮಿ ಜೊತೆ ಪವಿತ್ರಾ ರೀತಿ ಪವನ್‌ ಚಾಟ್‌ ಮಾಡಿದ್ದಾನೆ. ಹೀಗೆ ಮಾತನಾಡುತ್ತಾ ರೇಣುಕಾಸ್ವಾಮಿ ಫೋಟೊ ಕಳುಹಿಸುವಂತೆ ಪವನ್‌ ಹೇಳಿದ್ದಾನೆ. ಪವಿತ್ರಾಳೇ ಫೋಟೊ ಕಳುಹಿಸಲು ಹೇಳಿದ್ದಳೆಂದು ಭಾವಿಸಿ ಖುಷಿಯಾದ ರೇಣುಕಾಸ್ವಾಮಿ ಫೋಟೊ ಕಳುಹಿಸಿದ್ದಾನೆ. ಫೋಟೊ ಸಿಕ್ಕ ಮೇಲೆ ದರ್ಶನ್‌ ಗ್ಯಾಂಗ್‌ ಆಟ ಶುರು ಮಾಡಿದ್ದು, ಕೊಲೆಯಲ್ಲಿ ಅಂತ್ಯಗೊಂಡಿದೆ.

RELATED ARTICLES
- Advertisment -
Google search engine

Most Popular