ಬೆಂಗಳೂರು: ರೇಣುಕಾಸ್ವಾಮಿ ಭೀಕರ ಹತ್ಯೆಯ ಒಂದೊಂದೇ ಫೋಟೊಗಳು ಬಹಿರಂಗ ಆಗುತ್ತಿದೆ. ಚಿತ್ರಹಿಂಸೆ ಕೊಟ್ಟು ರೇಣುಕಾಸ್ವಾಮಿಯನ್ನು ಕೊಂದಿರುವುದನ್ನು ಫೋಟೊಗಳೇ ಸಾಕ್ಷಿ ನುಡಿಯುತ್ತಿವೆ.
ರೇಣುಕಾಸ್ವಾಮಿ ತಲೆ ಮೂರ್ನಾಲ್ಕು ಇಂಚು ಓಪನ್ ಆಗಿದೆ. ಮರದ ಪಟ್ಟಿಯಿಂದ ಹಲ್ಲೆ ಮಾಡಿ, ಲಾರಿಗೆ ಗುದ್ದಿಸಿ, ಆರೋಪಿಗಳು ಚಿತ್ರಹಿಂಸೆ ಕೊಟ್ಟಿರುವುದು ಫೋಟೊಗಳಿಂದ ಬೆಳಕಿಗೆ ಬಂದಿದೆ. ದರ್ಶನ್ ಗ್ಯಾಂಗ್‌ನ ಕ್ರೌರ್ಯ ಹೇಗಿತ್ತು ಎಂಬ ಸಾಕ್ಷ್ಯ ಈ ಫೋಟೊಗಳಿಂದ ಲಭ್ಯವಾಗಿದೆ.
ಮೊದಲಿಗೆ ಲಾಠಿ, ಮರದ ಪೀಸ್‌ನಿಂದ ಹಲ್ಲೆ ಮಾಡಿದ್ದಾರೆ. ಆಮೇಲೆ ನಿಂತಿದ್ದ ಲಾರಿಗೆ ಪದೇ ಪದೇ ತಲೆ ಗುದ್ದಿಸಿದ್ದಾರೆ. ತಲೆ ಗುದ್ದಿಸಿದ ಪರಿಣಾಮ, ತೀವ್ರ ರಕ್ತಸ್ರಾವವಾಗಿ ರೇಣುಕಾಸ್ವಾಮಿ ಸಾವನ್ನಪ್ಪಿದ್ದಾನೆ.
ರೇಣುಕಾಸ್ವಾಮಿಯ ದೇಹದ ಸ್ಥಿತಿ ಯಾವ ರೀತಿ ಇತ್ತು ಎಂಬುದನ್ನು ಈ ಫೋಟೊಗಳ ಮೂಲಕ ಕೊಲೆಯ ಭೀಕರತೆಯನ್ನು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ನಲ್ಲಿ ಪೊಲೀಸರು ತಿಳಿಸಿದ್ದಾರೆ. ಪಟ್ಟಣಗೆರೆ ಶೆಡ್‌ಗೆ ನಟ ದರ್ಶನ್ ಬಂದಿರುವ ಫೋಟೊ ಕೂಡ ಲಭ್ಯವಾಗಿದೆ. ರೇಣುಕಾಸ್ವಾಮಿ ಕಿವಿ ಕೂಡ ಕಟ್ ಆಗಿದೆ. ಭೀಕರವಾಗಿ ಹಲ್ಲೆ ಮಾಡಿ ಹತ್ಯೆ ಮಾಡಲಾಗಿದೆ. ಹತ್ಯೆಗೆ ಬಳಸಿದ್ದ ಮೆಗ್ಗಾರ್, ಹಗ್ಗ, ಪೊಲೀಸ್ ಲಾಠಿ, ಹಲ್ಲೆಗೆ ಬಳಸಿದ್ದ ಮರದ ಪೀಸ್ ಫೋಟೊಗಳು ಕೂಡ ರಿವೀಲ್ ಆಗಿದೆ.

