ಭಾರತ ಒಂದು ಪ್ರಜಾಸತ್ತಾತ್ಮಕ ದೇಶವಾಗಿ ವಿಚಾರ ಅಭಿವ್ಯಕ್ತಿ ನಂಬಿಕೆ ಭಕ್ತಿ ಮತ್ತು ಆರಾಧನೆಗಳಿಗೆ ಮಹತ್ವ ನೀಡುತ್ತಾ ಸಮಾನ ಸ್ಥಾನಮಾನ ಮತ್ತು ಅವಕಾಶಗಳನ್ನು ಪ್ರತಿಯೋರ್ವರಿಗೂ ಸಂವಿಧಾನದ ಮೂಲಕ ನೀಡುತ್ತಾ ಬಂದಿದೆ.
ತನ್ಮೂಲಕ ಪ್ರತಿಯೊಬ್ಬ ವ್ಯಕ್ತಿಯು ಕೆಲವು ಮೂಲಭೂತ ಹಕ್ಕುಗಳನ್ನು ಆನಂದಿಸಲು ಅನುಮತಿಸಲಾಗಿದೆ. ಭಾರತೀಯರಾದ ನಾವು ಭಾರತವನ್ನು ರಾಷ್ಟ್ರ ವಾಗಿ ಮಾರ್ಗದರ್ಶಿಸುವ ಸಂವಿಧಾನದ ಮೂಲ ತತ್ವಗಳನ್ನು ಹಕ್ಕುಗಳನ್ನು ಗೌರವಿಸುವುದರೊಂದಿಗೆ ದೇಶ ಸೇವೆಗೆ ನಮ್ಮನ್ನು ನಾವು ತೊಡಗಿಸಿಕೊಳ್ಳಲು ಸರ್ವದಾ ಸಿದ್ಧರಾಗಿರಬೇಕು ನಮ್ಮ ವಿದ್ಯಾಭ್ಯಾಸದ ಚರಮ ಹಾಗೂ ಪರಮ ಲಕ್ಷ್ಯ ದೇಶಸೇವೆಯೇ ಆಗಿರಬೇಕು. ವ್ಯಕ್ತಿಗಿಂತ ರಾಷ್ಟ್ರಮುಖ್ಯ ಎಂಬ ಅನುಸಂಧಾನದಲ್ಲಿ ನಾವು ತೊಡಗಿಸಿಕೊಳ್ಳಬೇಕು ಎಂದು ಬೆಂಗಳೂರು ಡಿ.ಜೆ.ಸಿ.ಎನ್ ಜತೆ ನಿರ್ದೇಶಕರಾದ ಜಗದೀಶ್ ಬಲ್ಲಾಳ್ ತಿಳಿಸಿದರು. ಅವರು ಮೂಡುಬಿದ್ರೆ ಎಕ್ಸಲೆಂಟ್ ಕಾಲೇಜಿನಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು ಬಳಿಕ ಮಾತನಾಡಿದ ಅವರು ಬಲಿಷ್ಠ ರಾಷ್ಟ್ರ ಕ್ಕಾಗಿ ಪ್ರತಿಯೋರ್ವ ವಿದ್ಯಾರ್ಥಿಯು ದೈಹಿಕ , ಬೌದ್ಧಿಕ ಹಾಗೂ ಸಾಂಸ್ಕೃ ತಿಕವಾಗಿ ಬಲಿಷ್ಠವಾಗಿ ತೊಡಗಿಸಿಕೊಳ್ಳಬೇಕು ಅಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್, ತಾಳ್ಮೆ ಮತ್ತು ಬ್ರಾತೃತ್ವದಿಂದ ಒಟ್ಟಿಗೆ ವಾಸಿಸುವ ವೈವಿಧ್ಯತೆಯಲ್ಲಿ ಏಕತೆ ಸಾಧಿಸಿದ ಭಾರತೀಯರಿಗೆ ಈ ದಿನ ಅತ್ಯಂತ ಮಹತ್ವದ ದಿನ. ಸಂವಿಧಾನದ ಮೌಲ್ಯಗಳನ್ನು ಗೌರವಿಸುವುದರೊಂದಿಗೆ ಭಕ್ತ ರಾಷ್ಟ್ರ ರಾಗೋಣ ಎಂದರು. ಬಳಿಕ ಸಂಸ್ಥೆಯ ಎನ್‌ಸಿಸಿ, ನೇವಿ ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಯಿತು.
ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ, ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್ ಉಪಸ್ಥಿತರಿದ್ದರು ಉಪನ್ಯಾಸಕಿ ಪ್ರಿಯಾಂಕ ನಿರೂಪಿಸಿ ವಂದಿಸಿದರು.